Asianet Suvarna News Asianet Suvarna News

ರಸ್ತೆಯಲ್ಲಿ ನಿಂತು ಸೆಲ್ಫಿ ಕೇಳಿದ್ದ ಅಭಿಮಾನಿಯನ್ನೇ ವಿವಾಹವಾಗಲಿರುವ ಟೆನಿಸ್‌ ತಾರೆ ಗಾರ್ಬಿನ್‌ ಮುಗುರುಜಾ!

ಸ್ಪೇನ್‌ನ ಖ್ಯಾತ ಟೆನಿಸ್‌ ತಾರೆ ಗಾರ್ಬಿನ್‌ ಮಗುರುಜಾ ಮದುವೆಯಾಗಲು ನಿಶ್ಚಯಿಸಿದ್ದಾರೆ. ರಸ್ತೆಯಲ್ಲಿ ನಿಂತು ನಾನು ನಿಮ್ಮ ಅಭಿಮಾನಿ, ನಿಮ್ಮದೊಂದು ಸೆಲ್ಫಿ ಸಿಗಬಹುದಾ ಎಂದು ಕೇಳಿದ್ದ ಹುಡುಗನನ್ನೇ ಮಾಜಿ ವಿಂಬಲ್ಡನ್‌ ಹಾಗೂ ಫ್ರೆಂಚ್‌ ಓಪನ್‌ ಚಾಂಪಿಯನ್‌ ವಿವಾಹವಾಗುತ್ತಿದ್ದಾರೆ.

Garbine Muguruza Former Wimbledon and French Open champion is getting married to fan san
Author
First Published May 31, 2023, 3:26 PM IST

ಮ್ಯಾಡ್ರಿಡ್‌ (ಮೇ.31): ಪ್ರಖ್ಯಾತ ಟೆನಿಸ್‌ ತಾರೆ ಮಾಜಿ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ತಮ್ಮ ದೀರ್ಘಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡಿದ್ದಾರೆ. ಬಹಳ ವಿಚಿತ್ರ ಸನ್ನಿವೇಶದಲ್ಲಿ ಸಿಕ್ಕ ಹುಡುಗನನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದ ಮುಗುರುಜಾ ಕೊನೆಗೂ ಮದುವೆಯಾಗುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. 2016ರಲ್ಲಿ ಫ್ರೆಂಚ್‌  ಓಪನ್‌ ಹಾಗೂ 2017ರಲ್ಲಿ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂನಲ್ಲಿ ಚಾಂಪಿಯನ್‌ ಆಗಿದ್ದ ಮುಗುರುಜಾ, ವಿಂಬಲ್ಡನ್‌ ಗೆಲುವಿನ ಬಳಿಕವೇ ಮೊಟ್ಟಮೊದಲ ಬಾರಿಗೆ ವಿಶ್ವ ನಂ.1 ಆಟಗಾರ್ತಿಯಾಗಿಯೂ ಹೊರಹೊಮ್ಮಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ 29 ವರ್ಷದ ಸ್ಪೇನ್‌ ಆಟಗಾರ್ತಿಯ ಫಾರ್ಮ್‌ನಲ್ಲಿ ಬಹಳ ಕುಂಠಿತವಾಗಿದೆ. ಮೈದಾನದಲ್ಲಿ ಗಾರ್ಬಿನ್‌ ಮುಗುರುಜಾ ಅದೃಷ್ಟ ಕೈಕೊಟ್ಟಿರುವಾಗ, ಕೋರ್ಟ್‌ನ ಹೊರಗಡೆ ಸ್ಪೇನ್‌ ಆಟಗಾರ್ತಿ ತಮ್ಮ ಸ್ಮರಣೀಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. 2021ರ ಆಗಸ್ಟ್‌ನಲ್ಲಿ ನ್ಯೂಯಾರ್ಕ್‌ನ ರಸ್ತೆಯಲ್ಲಿ ಆರ್ಥರ್‌ ಬೋರ್ಗೆಸ್‌ ಎನ್ನುವ ಹುಡುಗ, ರಸ್ತೆಯಲ್ಲಿ ನಿಂತು ಮುಗುರುಜಾ ಅವರ ಸೆಲ್ಫಿ ಕೇಳಿದ್ದ. ಆದರೆ, ಆತನನ್ನು ಕಂಡೊಡನೆ ಮುಗುರಜಾ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗಾಗಿತ್ತು. ಕೊನೆಗೆ ಆತನನ್ನೇ ಇಷ್ಟಪಟ್ಟು ಈಗ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.

ಆರ್ಥರ್‌ ಸಿಕ್ಕ ದಿನದ ಬಗ್ಗೆ ಮುಗುರುಜಾ ಹೇಳಿದ್ದಿಷ್ಟು: ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ನ ಸಮೀಪವೇ ನನ್ನ ಹೋಟೆಲ್‌ ಇತ್ತು. ಹೋಟೆಲ್‌ನಲ್ಲಿದ್ದು ಬಹಳ ಬೋರ್‌ ಆಗಿದ್ದ ಕಾರಣ ಒಂದು ಸಣ್ಣ ವಾಕ್‌ ಹೋಗಿ ಬರುವ ಕಾರಣಕ್ಕೆ ನಾನು ರಸ್ತೆಗೆ ಇಳಿದಿದ್ದೆ. ವಾಕಿಂಗ್‌ ಮಾಡಲು ರಸ್ತೆಗೆ ಇಳಿದ ಬೆನ್ನಲ್ಲಿಯೇ, ಅಚ್ಚರಿ ಎನ್ನುವಂತೆ ಆರ್ಥರ್‌ ನನಗೆ ಎದುರಾದರು. ನನ್ನತ್ತ ತಿರುಗಿದ ಅವರು, 'ಯುಎಸ್‌ ಓಪನ್‌ನಲ್ಲಿ ನಿಮಗೆ ಒಳ್ಳೆಯದಾಗಲಿ' ಎಂದು ಹೇಳಿದ್ದ. ಅದೇ ಕ್ಷಣ ನನ್ನ ಮನಸ್ಸಲ್ಲಿ ಆತ ಹೇಳಿದ್ದ ಮಾತಿಗಿಂತ, 'ಅಯ್ಯೋ, ಎಷ್ಟು ಸುಂದರವಾಗಿದ್ದಾನೆ' ಎನ್ನುವ ಯೋಚನೆ ನನ್ನ ತಲೆಗೆ ಬಂದಿತ್ತು ಎಂದು ಮುಗುರುಜಾ ಹೇಳಿದ್ದಾರೆ. ಆರ್ಥರ್‌ ಬೋರ್ಗಸ್‌ ವೃತ್ತಿಯಲ್ಲಿ ಮಾಡೆಲ್‌ ಆಗಿದ್ದು, ಆ ಕ್ಷಣದಲ್ಲಿ ಪ್ರಖ್ಯಾತ ಟಾಮ್‌ ಫೋರ್ಡ್‌ ಬ್ರ್ಯಾಂಡ್‌ನ ಕೆಲಸಕ್ಕಾಗಿ ನ್ಯೂಯಾರ್ಕ್‌ನಲ್ಲಿದ್ದರು. ಆ ಹಂತದಲ್ಲಿ ಅವರ ಇನ್ಸ್‌ಟಾಗ್ರಾಮ್‌ನಲ್ಲಿ 10 ಸಾವಿರದಷ್ಟು ಫಾಲೋವರ್ಸ್‌ಗಳಿದ್ದರು. ಹಾಗಿದ್ದರೂ ಮುಗುರುಜಾ, ಆರ್ಥರ್‌ ಅವರ ಲುಕ್‌ಗೆ ಬಿದಿದ್ದರು. ಆ ಹಂತದಲ್ಲಿ ಮುಗುರುಜಾ ವಿಶ್ವದ ನಂ.3 ಆಟಗಾರ್ತಿಯಾಗಿದ್ದರು.

ರಸ್ತೆಯಲ್ಲಿ ಆರ್ಥರ್‌ ಸೆಲ್ಫಿ ಕೇಳಿದ ದಿನದ ಬಳಿಕ ಇಬ್ಬರೂ ನಂತರ ಭೇಟಿಯಾಗಲು ಆರಂಭ ಮಾಡಿದ್ದರು. ಇದಾಗಿ ಅಂದಾಜು ಎರಡು ವರ್ಷದ ಬಳಿಕ, ಸ್ಪೇನ್‌ನ ಮಾರ್ಬಲಾದಲ್ಲಿ ಮೊದಲ ಬಾರಿಗೆ ಪ್ರಪೋಸ್‌ ಮಾಡಿದ್ದರು.  ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಗೆಳೆಯ ಆರ್ಥರ್‌ಬೋರ್ಗಸ್‌ ಜೊತೆಗೆ ಫೋಟೋವನ್ನು,  'ಹೆಲೋ' ಎಂದು ಹೇಳಿದ ದಿನವೇ ನಿನ್ನವಳಾಗಿಬಿಟ್ಟೆ' ಎಂದು ಕ್ಯಾಪ್ಟನ್‌ ಬರೆದು ಹಂಚಿಕೊಂಡಿದ್ದಾರೆ.

ಹೃದಯಾಘಾತದಿಂದ 24 ವರ್ಷದ ರಾಷ್ಟ್ರೀಯ ವಾಲಿಬಾಲ್‌ ಆಟಗಾರ್ತಿ ಸಾವು!

ಪ್ರಪೋಸಲ್‌ ಮಾಡಿದ ದಿನದ ಬಗ್ಗೆ ಮಾಡಿದ ಮಾತನಾಡಿರುವ ಮುಗುರುಜಾ, 'ನನಗೆ ಬಹಳ ನಾಚಿಕೆಯಾಗಿತ್ತು. ನಾನು ಬೇರೆನೋ ನಿರೀಕ್ಷೆ ಮಾಡುತ್ತಿದ್ದೆ. ಆತ ಪ್ರಪೋಸ್‌ ಮಾಡಿದಾಗ ಅಳುವೇ ಬಂದುಬಿಟ್ಟಿತು. ಏನು ರಿಯಾಕ್ಟ್‌ ಮಾಡಬೇಕು ಅನ್ನೋದೇ ಗೊತ್ತಾಗಿರಲಿಲ್ಲ. ಕಣ್ಣೀರಿಡುತ್ತಲೇ ಯೆಸ್‌ ಎಂದುಬಿಟ್ಟೆ. ಆದರೆ, ಆ ಕ್ಷಣ ಬಹಳ ರೊಮ್ಯಾಂಟಿಕ್‌ ಆಗಿತ್ತು' ಎಂದಿದ್ದಾರೆ. ಮದುವೆಯಾಗುವ ದಿನ ಇನ್ನೂ ನಿರ್ಧಾರವಾಗಿಲ್ಲ. ಆದರೆ, ಬೀಚ್‌ ಪಕ್ಕದಲ್ಲಿ ವಿವಾಹವಾಗುವ ಬಯಕೆ ಇದೆ ಎಂದಿದ್ದಾರೆ.

'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

ವೆನುಜುವೆಲಾದಲ್ಲಿ ಜನಿಸಿದ ಮುಗುರುಜಾ  ಸ್ಪೇನ್‌ಅನ್ನು ಪ್ರತಿನಿಧಿಸುತ್ತಾರೆ. ಆದರೆ, ಬೋರ್ಗೆಸ್‌ ಸ್ಪೇನ್‌ ಮೂಲದವರಾಗಿದ್ದು, ಫಿನ್ಲೆಂಡ್‌ನಲ್ಲಿ ಬೆಳೆದವರಾಗಿದ್ದಾರೆ. 'ನನ್ನ ರೀತಿಯಲ್ಲಿಯೇ ಅವರೂ ಕೂಡ ಮಿಕ್ಸ್‌. ನಾನು ವೆನುಜುವೆಲಾ ಹಾಗೂ ಸ್ಪ್ಯಾನಿಷ್‌. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿಲ್ಲ. ನಾವು ಜಗತ್ತಿನ ಪ್ರಜೆಗಳು ಎನ್ನುವ ಭಾವನೆ ಇದೆ' ಎಂದಿದ್ದಾರೆ.

Follow Us:
Download App:
  • android
  • ios