'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವು ಗುಜರಾತ್‌ ಮಾಡೆಲ್‌ ವಿರುದ್ಧ ದ್ರಾವಿಡ ಮಾಡೆಲ್‌ನ ಗೆಲುವು ಎಂದು ಡಿಎಂಕೆ ಪಕ್ಷ ಪ್ರತಿಕ್ರಿಯೆ ನೀಡಿತ್ತು. ಇದಕ್ಕೆ ಉತ್ತರ ನೀಡುವ ವೇಳೆ ಅಣ್ಣಾಮಲೈ ಈ ರೀತಿಯ ಹೇಳಿಕೆ ನೀಡಿದ್ದಾರೆ.
 

Kannada News K Annamalai says BJP karyakarta Ravindra Jadeja helped CSK win IPL final san

ಚೆನ್ನೈ (ಮೇ.31): ಗುಜರಾತ್‌ನ ಅಹಮದಾಬಾದ್‌ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದು ಬಿಜೆಪಿ ಪಕ್ಷ ಕಾರ್ಯಕರ್ತ ಅನ್ನೋದು ನೆನಪಿರಲಿ. ಆ ಮೂಲಕ ಗರಿಷ್ಠ ಐಪಿಎಲ್‌ ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಐದು ಟ್ರೋಫಿ ಸಾಧನೆಯನ್ನು ಸರಿಗಟ್ಟುವಂತೆ ಮಾಡಿದ್ದು ಬಿಜೆಪಿಯ ಕಾರ್ಯಕರ್ತ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಳೆ ಬಾಧಿತ ಐಪಿಎಲ್‌ ಫೈನಲ್‌ ಪಂದ್ಯ ರೋಚಕವಾಗಿ ಕೊನೆಗೊಂಡಿತ್ತು. ಥ್ರಿಲ್ಲಿಂಗ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸೋಲಿಸಿತ್ತು. ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳನ್ನು ಎದುರಿಸಿದ್ದ ರವೀಂದ್ರ ಜಡೇಜಾ, ಬೇಕಾಗಿದ್ದ 10 ರನ್‌ಗಳನ್ನು ಒಂದು ಬೌಂಡರಿ, ಒಂದು ಸಿಕ್ಸರ್‌ ಬಾರಿಸುವ ಮೂಲಕ ಎಂಎಸ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲುವು ಕಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 214 ರನ್‌ ಬಾರಿಸಿದ್ದರೆ, ಮಳೆಯಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ `5 ಓವರ್‌ಗಳಲ್ಲಿ 171 ರನ್‌ ಬಾರಿಸುವ ಸವಾಲು ನಿಗದಿ ಮಾಡಲಾಗಿತ್ತು.

'ಜಡೇಜಾ ಬಿಜೆಪಿಯ ಕಾರ್ಯಕರ್ತ ಅದಲ್ಲದೆ ಅವರು ಗುಜರಾತ್‌ ಮೂಲದವರು. ಜಡೇಜಾ ಅವರ ಪತ್ನಿ ಬಿಜೆಪಿಯ ಶಾಸಕಿ. ಒಬ್ಬ ತಮಿಳುನಾಡಿನ ವ್ಯಕ್ತಿಯಾಗಿ ನನಗೂ ಇದು ಹೆಮ್ಮೆಯ ವಿಷಯ. ಗುಜರಾತ್‌ ಟೈಟಾನ್ಸ್‌ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಂತ ಹೆಚ್ಚಿನ ತಮಿಳು ಆಟಗಾರರಿದ್ದಾರೆ. ನಾನು ಅದನ್ನೂ ಕೂಡ ಸಂಭ್ರಮಿಸುತ್ತೇನೆ' ಎಂದು ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಗೆಲುವು, ಗುಜರಾತ್‌ ಮಾಡೆಲ್‌ ವಿರುದ್ಧ ದ್ರಾವಿಡ ಮಾಡೆಲ್‌ನ ಗೆಲುವು' ಎಂದು ಡಿಎಂಕೆ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಅಣ್ಣಾಮಲೈ ಈ ಮಾತು ಹೇಳಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಅಣ್ಣಾಮಲೈ,  ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಮತ್ತೊಬ್ಬ ತಮಿಳಿನ ಸಾಯಿ ಸುದರ್ಶನ್ ಅವರ ಆಟವನ್ನೂ ಶ್ಲಾಘಿಸಿದರು. “96 ರನ್ ಗಳಿಸಿದ ತಮಿಳಿಗ, ನಾವು ಅದನ್ನು ಸಹ ಸಂಭ್ರಮಿಸುತ್ತೇವೆ. ಸಿಎಸ್‌ಕೆಯಲ್ಲಿ ಒಬ್ಬ ತಮಿಳಿಗನೂ ಆಡಿಲ್ಲ. ಆದರೆ ಎಂಎಸ್ ಧೋನಿಯಿಂದಾಗಿ ನಾವು ಇನ್ನೂ ಸಿಎಸ್‌ಕೆ ಗೆಲುವನ್ನು ಆಚರಿಸುತ್ತೇವೆ. ಬಿಜೆಪಿ ಕಾರ್ಯಕರ್ತರು ಗೆಲುವಿನ ಓಟವನ್ನು ಮುಂದುವರಿಸಿರುವುದು ನಮಗೆ ಹೆಮ್ಮೆ ತಂದಿದೆ' ಎಂದರು.

ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!

ಜಡೇಜಾ ಅವರು ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಣೆ ಮಾಡಿದ್ದರೂ, ಆದರೆ, ಕ್ರಿಕೆಟಿಗ ಬಿಜೆಪಿ ಸದಸ್ಯರಾಗಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗೊಲ್ಲ. ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ. ರಿವಾಬಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು 2022 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 80,000 ಮತಗಳ ಅಂತರದಿಂದ ಜಯಿಸಿದ್ದರು.

22 ಪ್ಲೇಯರ್‌ ಮಾತ್ರವೇ ಆಡ್ತಿಲ್ಲ..' ಐಪಿಎಲ್‌ ಫೈನಲ್‌ ಟೈಮ್‌ನಲ್ಲಿ 'ಕಾಂಡಮ್‌' ಬೇಡಿಕೆ ಟ್ರೋಲ್‌ ಮಾಡಿದ ಸ್ವಿಗ್ಗಿ!

Latest Videos
Follow Us:
Download App:
  • android
  • ios