Asianet Suvarna News Asianet Suvarna News

ಕ್ರಿಕೆಟ್‌ಗೆ ಗೌತಮ್ ಗಂಭೀರ್ ರೀ ಎಂಟ್ರಿ!

2018-19ರ ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ತಂಡ ಪ್ರಕಟವಾಗಿದೆ. ಮೊದಲ 3 ಪಂದ್ಯಗಳಿಗೆ ದೆಹಲಿ ತಂಡದ ನಾಯಕರಾಗಿ ಹಿರಿಯ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. 

Gambhir  delhi captain for Vijay Hazare Cricket trophy
Author
Mumbai, First Published Sep 16, 2018, 1:14 PM IST
  • Facebook
  • Twitter
  • Whatsapp

ದೆಹಲಿ (ಸೆ.16): 2018-19ರ ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ತಂಡ ಪ್ರಕಟವಾಗಿದೆ. ಮೊದಲ 3 ಪಂದ್ಯಗಳಿಗೆ ದೆಹಲಿ ತಂಡದ ನಾಯಕರಾಗಿ ಹಿರಿಯ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. 

2016-17ರ ಟೂರ್ನಿಗೆ ಗಂಭೀರ್ ಅವರನ್ನು ನಾಯ ಕತ್ವದಿಂದ ಕೆಳಗಿಳಿಸಲಾಗಿತ್ತು. ಕಳೆದ ಋತುವಿನಲ್ಲಿ ಗಂಭೀರ್, ತಾವೇ ನಾಯಕತ್ವದಿಂದ ಹಿಂದೆ ಸರಿದಿದ್ದರು. ಗಂಭೀರ್ ಟೀವಿ ವಾಹಿನಿಗಳಲ್ಲಿ
ಕ್ರಿಕೆಟ್ ತಜ್ಞರಾಗಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ.

ಇದನ್ನು ಓದಿ: ಹಣೆಗೆ ಕುಂಕುಮ, ತಲೆಗೆ ದುಪ್ಪಟ್ಟ- ಗಂಭೀರ್ ಹೊಸ ಅವತಾರ!

ಜತೆಗೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅವರಿಗೆ ಜವಾಬ್ದಾರಿ ಸಹ ನೀಡಲಾಗುತ್ತಿದೆ ಎನ್ನುವ ಸುದ್ದಿ ಇದೆ. ಹೀಗಿರುವಾಗ ಅವರನ್ನು ತಂಡದ ನಾಯಕರನ್ನಾಗಿ ಮಾಡಿರುವುದು ಸ್ವಹಿತಾಸಕ್ತಿ ಆರೋಪಕ್ಕೆ
ದಾರಿ ಮಾಡಿಕೊಟ್ಟಿದೆ.

Follow Us:
Download App:
  • android
  • ios