ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಇತರ ಎಲ್ಲಾ ಕ್ರಿಕೆಟಿಗರಿಗಿಂತ ಭಿನ್ನ. ಹೊಸ ಆಲೋಚನೆ ಹಾಗೂ ಸದಾ ದೇಶದ ಪರ ಧನಿ ಎತ್ತೋ ಕ್ರಿಕೆಟಿಗ. ಇದೀಗ ಗೌತಮ್ ಗಂಭೀರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ಗಂಭೀರ್ ಅವತಾರ.
ನವದೆಹಲಿ(ಸೆ.14): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದರೂ ಪ್ರತಿ ದಿನ ಸುದ್ದಿಯಲ್ಲಿದ್ದಾರೆ. ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಗಂಭೀರ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋ ಮೂಲಕ ಭರ್ಜರಿ ಸದ್ದು ಮಾಡಿದ್ದಾರೆ.
ತಲೆ ಮೇಲೆ ದುಪ್ಪಟ್ಟ, ಹಣೆಗೆ ಕುಂಕುಮ ಹಾಕಿ ಹೆಣ್ಣಿನ ವೇಷಭೂಷಣದಲ್ಲಿ ಗಂಭೀರ್ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಗಂಭೀರ್ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದು, ದೆಹಲಿಯಲ್ಲಿ ನಡೆದ ಹಿಜಿರಾ ಹಬ್ಬದಲ್ಲಿ .
ಶೆಮಾರಿ ಸಮಾಜ ಆಯೋಜಿಸಿದ ತೃತೀಯಲಿಂಗಿಗಳ ಹಿಜಿರಾ ಹಬ್ಬದ ಉದ್ಘಾಟನೆ ಮಾಡಿದ ಗೌತಮ್ ಗಂಭೀರ್ ಹೊಸ ವೇಷಭೂಷಣದಲ್ಲಿ ಕಾಣಿಸಿಕೊಂಡರು. ಈ ಮೂಲಕ ತೃತೀಯಲಿಂಗಗಳಿಗೆ ಗಂಭೀರ್ ಬೆಂಬಲ ಸೂಚಿಸಿದರು.
ಗಂಭೀರ್ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಕ್ಷಾ ಬಂಧನ ದಿನ, ತೃತೀಯ ಲಿಂಗಗಳಿಂದ ರಕ್ಷಾ ಬಂಧನ ಕಟ್ಟಿಸಿಕೊಂಡು ಸುದ್ದಿಯಾಗಿದ್ದರು.
