ಮೊದಲು ಅಧಿಕಾರಿಗಳನ್ನು ಸರಿದಾರಿಗೆ ತರಬೇಕು. ಮ್ಯಾಚ್‌ಫಿಕ್ಸಿಂಗ್ ಮಾಡುವವರೊಂದಿಗೆ ಅಧ್ಯಕ್ಷರಿಗೆ ನೇರ ಸಂಪರ್ಕವಿದೆ.
ಕೊಲಂಬೊ(ಆ.9): ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಲಂಕಾ ತಂಡದ ಆಟಗಾರರ ಇಂತಹ ಪ್ರದರ್ಶನಕ್ಕೆ ಕ್ರಿಕೆಟ್ ಮಂಡಳಿ ಅಧ್ಯಕ್ಷರೇ ನೇರ ಹೊಣೆ ಎಂದು ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಆರೋಪಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶೀಘ್ರ ತನಿಖೆ ನಡೆಸಬೇಕು ಎಂದು ರಣತುಂಗಾ ಆಗ್ರಹಿಸಿದ್ದಾರೆ.
‘ತಂಡದ ಈ ಕಳಪೆ ಪ್ರದರ್ಶನಕ್ಕೆ ಮಂಡಳಿ ಅಧ್ಯಕ್ಷರಾದ ತಿಲಂಗಾ ಸುಮಥಿಪಾಲಾ ಕಾರಣರಾಗಿದ್ದಾರೆ. ತಂಡದಲ್ಲಿ ಶಿಸ್ತು ಇಲ್ಲವಾಗಿದೆ. ಆದರೆ, ಇದಕ್ಕೆ ಆಟಗಾರರನ್ನು ದೂಷಿಸಿದರೆ ಯಾವುದೇ ಪ್ರಯೋಜನವಿಲ್ಲ. ಕಳ್ಳಾಟ ನಡೆಯುವಾಗ ಏನು ಮಾಡಲು ಸಾಧ್ಯವಿಲ್ಲ. ಮೊದಲು ಅಧಿಕಾರಿಗಳನ್ನು ಸರಿದಾರಿಗೆ ತರಬೇಕು. ಮ್ಯಾಚ್ಫಿಕ್ಸಿಂಗ್ ಮಾಡುವವರೊಂದಿಗೆ ಅಧ್ಯಕ್ಷರಿಗೆ ನೇರ ಸಂಪರ್ಕವಿದೆ. ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ. ತನಿಖೆ ನಡೆಸಬೇಕು’ ಎಂದಿದ್ದಾರೆ.
