Asianet Suvarna News Asianet Suvarna News

ಇಂಗ್ಲೆಂಡ್ ಮಾಜಿ ನಾಯಕ ಸ್ಟ್ರಾಸ್ ಪತ್ನಿ ನಿಧನ!

ಇಂಗ್ಲೆಂಡ್ ಮಾಜಿ ನಾಯಕ, ವೇಲ್ಸ್ ಮಂಡಳಿ ಅಧ್ಯಕ್ಷ ಆ್ಯಂಡ್ರೂ ಸ್ಟ್ರಾಸ್ ಪತ್ನಿ ನಿಧನರಾಗಿದ್ದಾರೆ.  ಅಷ್ಟಕ್ಕೂ ಶ್ರೇಷ್ಠ ಕ್ರಿಕೆಟಿಗನ ಪತ್ನಿ ದಿಢೀರ್ ಕೊನೆಯುಸಿರೆಳಿದಿದ್ದು ಹೇಗೆ? ಇಲ್ಲಿದೆ ವರದಿ.

Former England cricke captain Andrew Strauss Wife Ruth dies
Author
Bengaluru, First Published Dec 29, 2018, 10:08 PM IST
  • Facebook
  • Twitter
  • Whatsapp

ಲಂಡನ್(ಡಿ.29): ಇಂಗ್ಲೆಂಡ್ ಮಾಜಿ ನಾಯಕ, ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಆ್ಯಂಡ್ರೂ ಸ್ಟ್ರಾಸ್ ಪತ್ನಿ ರುಥ್ ಸ್ಟ್ರಾಸ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ರುತ್ ಸ್ಟ್ರಾಸ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಪೈನ್’ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಪಂತ್

2017ರ ಆ್ಯಶಸ್ ಟೆಸ್ಟ್ ಸರಣಿಗೂ ಕೆಲ ದಿನಗಳಿರುವಾಗಲೇ ಸ್ಟ್ರಾಸ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಪತ್ನಿಗೆ ಕ್ಯಾನ್ಸರ್ ಚಿಕಿತ್ಸೆ ನೀಡೋ ಸಲುವಾಗಿ ಅಧ್ಯಕ್ಷ  ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಪತ್ನಿ ಜೊತೆ ಚಿಕಿತ್ಸೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು.

ಇದನ್ನೂ ಓದಿ: ರಣಜಿಯಲ್ಲೇ ಖುಷಿ ಪಡುತ್ತಿದ್ದೇನೆ: ಶ್ರೇಯಸ್‌

ರುತ್ ನಿಧನದ ಕುರಿತು ಸ್ಟ್ರಾಸ್ ಕುಟಂಬ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿದೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹಾಗೂ ತಂಡಕ್ಕೆ ಧನ್ಯವಾದ ಹೇಳಿದೆ. ಇಷ್ಟೇ ಅಲ್ಲ ರುತ್ ಹೆಸರನ್ನ ಕ್ಯಾನ್ಸರ್ ಫೌಂಡೇಶನ್ ಆರಂಭಿಸುವುದಾಗಿ ಸ್ಟ್ರಾಸ್ ಕುಟುಂಬ ಹೇಳಿದೆ. ಈ ಮೂಲಕ ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ಮುಂದಾಗಿದೆ.

Follow Us:
Download App:
  • android
  • ios