Asianet Suvarna News Asianet Suvarna News

ರಣಜಿಯಲ್ಲೇ ಖುಷಿ ಪಡುತ್ತಿದ್ದೇನೆ: ಶ್ರೇಯಸ್‌

2014ರಲ್ಲಿ ರಣಜಿ ಟ್ರೋಫಿಯಲ್ಲಿ ಮಿಂಚುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಶ್ರೇಯಸ್‌ ಅವಕಾಶದ ಕೊರತೆ ಎದುರಿಸುತ್ತಿದ್ದಾರೆ. ಭಾರತದ ಪರ ಅವರು ಕೊನೆಯದಾಗಿ ಆಡಿದ್ದು ಈ ವರ್ಷ ಫೆಬ್ರವರಿಯಲ್ಲಿ. ವಿಂಡೀಸ್‌ ವಿರುದ್ಧ ಏಕದಿನ ಪಂದ್ಯವನ್ನಾಗಿದ್ದರು. 

I am emotionless now Says Mumbai Cricketer Shreyas Iyer
Author
New Delhi, First Published Dec 29, 2018, 4:23 PM IST
  • Facebook
  • Twitter
  • Whatsapp

ನವದೆಹಲಿ(ಡಿ.29): ‘ಭಾರತ ತಂಡಕ್ಕೆ ಆಯ್ಕೆಯಾಗುವುದು ತಾತ್ಕಾಲಿಕ. ತಂಡಕ್ಕೆ ಆಯ್ಕೆಯಾಗುವುದರ ಕುರಿತು ಯೋಚಿಸುವುದನ್ನು ಕೈಬಿಟ್ಟಿದ್ದೇನೆ. ಸದ್ಯ ನಾನು ಭಾವನಾರಹಿತನಾಗಿದ್ದೇನೆ’ ಎಂದು ಮುಂಬೈ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಹತಾಶೆ ವ್ಯಕ್ತಪಡಿಸಿದ್ದಾರೆ. 

2014ರಲ್ಲಿ ರಣಜಿ ಟ್ರೋಫಿಯಲ್ಲಿ ಮಿಂಚುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಶ್ರೇಯಸ್‌ ಅವಕಾಶದ ಕೊರತೆ ಎದುರಿಸುತ್ತಿದ್ದಾರೆ. ಭಾರತದ ಪರ ಅವರು ಕೊನೆಯದಾಗಿ ಆಡಿದ್ದು ಈ ವರ್ಷ ಫೆಬ್ರವರಿಯಲ್ಲಿ. ವಿಂಡೀಸ್‌ ವಿರುದ್ಧ ಏಕದಿನ ಪಂದ್ಯವನ್ನಾಗಿದ್ದರು. 

‘ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದೆ, ಸಿಕ್ಕಿಲ್ಲ ಎಂದು ಯಾರಾದರು ಮಾಹಿತಿ ನೀಡುತ್ತಾರೆ. ನಾನು ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದೇನೆ. ತಂಡಕ್ಕೆ ಆಯ್ಕೆಯಾಗುವ ವಿಚಾರ ನನ್ನ ಸಂತಸದ ಕ್ಷಣಗಳನ್ನು ಆಳುವುದು ನನಗೆ ಇಷ್ಟವಿಲ್ಲ. ರಣಜಿಯಲ್ಲಿ ಆಡುವುದು ನನಗೆ ಖುಷಿ ಕೊಡುತ್ತಿದೆ’ ಎಂದು ಶ್ರೇಯಸ್‌ ಹೇಳಿದ್ದಾರೆ.
 
Follow Us:
Download App:
  • android
  • ios