ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸ್ ಬೇಡ; ಕೊಹ್ಲಿ ನಿರ್ಭೀತತೆ ಬೇಕು: ರಮೀಝ್ ರಾಜ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೀತಿಯ ಆಕ್ರಮಣಕಾರಿ ಗುಣ ಪಾಕಿಸ್ತಾನ ತಂಡಕ್ಕೆ ಅವಶ್ಯಕತೆ ಇದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ರಮೀಝ್ ರಾಜ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಕರಾಚಿ(ಆ.23): ಪಾಕಿಸ್ತಾನ ಕ್ರಿಕೆಟ್ ಬದಲಾವಣೆ ತರಲು ಮುಂದಾಗಿದೆ. ಸದ್ಯ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಮಾರ್ಗದರ್ಶನದಲ್ಲಿ ಪಾಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟಿಗರ ತಾಲೀಮು ನಡೆಯುತ್ತಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಮಿಸ್ಬಾ ಎಂಟ್ರಿಗೆ ಹಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಮಾಜಿ ಕ್ರಿಕೆಟಿಗ ರಮೀಝ್ ರಾಜಾ, ಮಿಸ್ಬಾ ಅಪ್ರೋಚ್ ಕುರಿತು ಪ್ರಶ್ನೆ ಎತ್ತಿದ್ದಾರೆ. ಇಷ್ಟೇ ಅಲ್ಲ ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸೀವ್ ಬೇಡ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೀತಿಯ ನಿರ್ಭೀತತೆ ಬೇಕು ಎಂದಿದ್ದಾರೆ.
ಇದನ್ನೂ ಓದಿ: ಒಂದನ್ನು ಬಿಟ್ಟು ಇನ್ನುಳಿದ ಎಲ್ಲಾ ಸಚಿನ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ
ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ ಉಲ್ ಹಕ್, ಎದುರಾಳಿ ತಪ್ಪು ಮಾಡುವವರೆಗೆ ಕಾಯತ್ತಾರೆ. ಬಳಿಕ ತಮ್ಮ ಗೇಮ್ ಪ್ಲಾನ್ ರೂಪಿಸುತ್ತಾರೆ. ಈ ರೀತಿಯ ಶೈಲಿ ಸದ್ಯ ಪಾಕಿಸ್ತಾನ ತಂಡಕ್ಕೇ ಬೇಡ. ಬದಲಾಗಿ ಕೊಹ್ಲಿ ರೀತಿಯ ನಿರ್ಭೀತ, ಆಕ್ರಮಣಕಾರಿ ಶೈಲಿ ಬೇಕು. ಕೊಹ್ಲಿ ನಾಯಕತ್ವದಿಂದ ಟೀಂ ಇಂಡಿಯಾ ಉತ್ತುಂಗಕ್ಕೇರಿದೆ. ಪಾಕಿಸ್ತಾನಕ್ಕೆ ಈ ರೀತಿಯ ಅಪ್ರೋಚ್ ಅವಶ್ಯಕತೆ ಇದೆ ಎಂದು ರಾಜಾ ಹೇಳಿದ್ದಾರೆ.
ಇದನ್ನೂ ಓದಿ: ಅಲುಗಾಡುತ್ತಿದೆ ರಿಕಿ ಪಾಂಟಿಂಗ್ ದಾಖಲೆ; ಹೊಸ ಇತಿಹಾಸಕ್ಕೆ ಸಜ್ಜಾದ ಕೊಹ್ಲಿ!
ಮಿಸ್ಬಾ ಮಾರ್ಗದರ್ಶನ ಪಾಕ್ ತಂಡಕ್ಕೆ ಹೆಚ್ಚಿನ ಸಹಾಯ ಮಾಡುವುದಿಲ್ಲ ಎಂದು ರಾಜಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ತದ್ವಿರುದ್ದ ಹೇಳಿಕೆ ನೀಡುತ್ತಿದ್ದಾರೆ. ಇತ್ತ ಕೋಚ್ ಹಾಗೂ ಸಹಾಯಕ ಸಿಬ್ಬಂಧಿ ಆಯ್ಕೆಗೆ ಲಾಬಿ ಕೂಡ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.