ಓಲ್ಡ್ ಟ್ರಾಫೋರ್ಡ್(ಜು.04): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯದ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ತಂಡಕ್ಕೆ ಕೆಎಲ್ ರಾಹುಲ್ ಸ್ಫೋಟಕ ಇನ್ನಿಂಗ್ಸ್ ವರದಾನವಾಯಿತು. ರಾಹುಲ್ 27 ಎಸೆತದಲ್ಲಿ ಅರ್ಧಶತಕ ಪೂರೈಸಿದರೆ, ರೋಹಿತ್ ಶರ್ಮಾ ಉತ್ತಮ ಸಾಥ್ ನೀಡಿದರು. ಬೌಂಡರಿ ಸಿಕ್ಸರ್ ಮೂಲಕ ರಾಹುಲ್ ಅಬ್ಬರಿಸಿದರು.  ಇತ್ತ ರೋಹಿತ್ 32 ರನ್ ಸಿಡಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. 130 ರನ್‌ಗಳಿಗೆ ಭಾರತ 2ನೇ ವಿಕೆಟ್ ಕಳೆದುಕೊಂಡಿತು. 

ರೋಹಿತ್ ವಿಕೆಟ್ ಪತನದ ಬಳಿಕ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಉಪಯುಕ್ತ ಜೊತೆಯಾಟ ನೀಡಿದರು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ರಾಹುಲ್,  ಎಸೆತದಲ್ಲಿ  ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದರು. 

ವಿರಾಟ್ ಕೊಹ್ಲಿ 8 ರನ್ ಪೂರೈಸುತ್ತಿದ್ದಂತೆ, ಟಿ20 ಕ್ರಿಕೆಟ್‌ನಲ್ಲಿ 2000 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಗೆ ಪಾತ್ರರಾದರು. ರಾಹುಲ್  ಅಜೇಯ 100  ರನ್ ಸಿಡಿಸಿದರೆ, ಕೊಹ್ಲಿ ಅಜೇಯ 20  ರನ್ ಬಾರಿಸಿದರು. ಈ ಮೂಲಕ ಭಾರತ 18.2 ಓವರ್‌ಗಳಲ್ಲಿ2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 

ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಟಿ20: ಚುಟುಕು ಕ್ರಿಕೆಟ್‌ನಲ್ಲಿ ಎಂ ಎಸ್ ಧೋನಿ ವಿಶ್ವ ದಾಖಲೆ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತು. ಜೇಸನ್ ರಾಯ್ 30 ರನ್ ಸಿಡಿಸಿದರೆ, ಅಲೆಕ್ಸ್ ಹೇಲ್ಸ್ ಕೇವಲ 8 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಇಯಾನ್ ಮಾರ್ಗನ್, ಜಾನಿ ಬೈರಿಸ್ಟೋ ,  ಜೋ ರೂಟ್ ಸ್ಪಿನ್ನರ್ ಕುಲದೀಪ್ ಮೋಡಿಗೆ ಬಲಿಯಾದರು.  ಮೊಯಿನ್ ಆಲಿ 6 ರನ್‌ಗಳಿಸಿ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ ಹೋರಾಟ 69 ರನ್‌ಗಳಿಗೆ ಅಂತ್ಯವಾಯಿತು.  ಇಂಗ್ಲೆಂಡ್ ನಾಡಿನಲ್ಲಿ ಸ್ಪಿನ್ ಜಾದು ಮಾಡಿದ ಕುಲದೀಪ್ ಯಾದವ್ ಪ್ರಮುಖ 5 ವಿಕೆಟ್ ಕಬಳಿಸಿದರು.  ಕ್ರಿಸ್ ಜೋರ್ಡಾನ್ ಡಕೌಟ್ ಆದರು. ಡೇವಿಡ್ ವಿಲೆ ಸಿಡಿಸಿದ ಅಜೇಯ 29 ರನ್‌ಗಳ ನೆರವಿನಿಂದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು.