ಭಾರತ-ಇಂಗ್ಲೆಂಡ್ ಟಿ20: ಚುಟುಕು ಕ್ರಿಕೆಟ್‌ನಲ್ಲಿ ಎಂ ಎಸ್ ಧೋನಿ ವಿಶ್ವ ದಾಖಲೆ

MS Dhoni set World Record of Most Stumps in T20
Highlights

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಎಂ ಎಸ್ ಧೋನಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆಂಗ್ಲರ ನಾಡಿನಲ್ಲಿ ಧೋನಿ ಬರೆದ ವರ್ಲ್ಡ್ ರೆಕಾರ್ಡ್ ಏನು? ಇಲ್ಲಿದೆ ಡೀಟೇಲ್ಸ್

ಓಲ್ಡ್ ಟ್ರಾಫೋರ್ಡ್(ಜು.03): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪ್ ಮಾಡೋ ಮೂಲಕ ಧೋನಿ ದಾಖಲೆ ಬರೆದಿದ್ದಾರೆ.

ಕುಲದೀಪ್ ಯಾದವ್ ಎಸೆತದಲ್ಲಿ ಜಾನಿ ಬೈರಿಸ್ಟೋ ಹಾಗೂ ಜೋ ರೂಟ್ ಅವರನ್ನ ಸ್ಟಂಪ್ ಔಟ್ ಮಾಡಿದ ಎಂ ಎಸ್ ಧೋನಿ ಚುಟುಕು ಕ್ರಿಕೆಟ್‌ನಲ್ಲಿ 33 ಸ್ಟಂಪ್ ಔಟ್ ಮಾಡಿದ ಸಾಧನೆ ಮಾಡಿದರು. ಈ ಮೂಲಕ ಪಾಕಿಸ್ತಾನ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ದಾಖಲೆ ಮುರಿದರು.ಕಮ್ರಾನ್ ಅಕ್ಮಲ್ ಟಿ20 ಕ್ರಿಕೆಟ್‌ನಲ್ಲಿ 32 ಸ್ಟಂಪ್ ಔಟ್ ಮಾಡಿದ್ದಾರೆ. 

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪ್ ಔಟ್:

ಎಂ ಎಸ್ ಧೋನಿ(ಭಾರತ)  - 33
ಕಮ್ರಾನ್ ಅಕ್ಮಲ್(ಪಾಕಿಸ್ತಾನ) -32
ಮೊಹಮ್ಮದ್ ಶೆಹಝಾದ್(ಅಫ್ಘಾನಿಸ್ತಾನ)- 28
ಮುಶಿಫಿಕರ್ ರಹೀಮ್(ಬಾಂಗ್ಲಾದೇಶ) -26
ಕುಮಾರ ಸಂಗಕ್ಕಾರ(ಶ್ರೀಲಂಕ) - 20
 

loader