ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಅಭ್ಯಾಸ ನಡೆಸುತ್ತಿರುವ ಪೋರ್ಚುಗಲ್ ತಂಡಕ್ಕೆ ಹೊಸ ಸ್ಟಾರ್ ಪ್ಲೇಯರ್ ಸೇರಿಕೊಂಡಿದ್ದಾರೆ. ಆದರೆ ಈತನ ವಯಸ್ಸು ಕೇವಲ 7. ಅಭಿಮಾನಿಗಳನ್ನ ಅಚ್ಚರಿಗೊಳಿಸಿದೆ ಈ ಪೋರ ಯಾರು? ಇಲ್ಲಿದೆ ವಿವರ

ರಶ್ಯಾ(ಜೂನ್.8) ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಸಜ್ಜಾಗುತ್ತಿರುವ ಪೋರ್ಚುಗಲ್ ತಂಡಕ್ಕೆ ಹೊಸ ಸ್ಟಾರ್ ಪ್ಲೇಯರ್ ಆಗಮನವಾಗಿದೆ. ಅದು ಬೇರೆ ಯಾರು ಅಲ್ಲ ಕ್ರಿಸ್ಟಿಯಾನೋ ರೋನಾಲ್ಡೋ ಮಗ, ಜ್ಯೂನಿಯರ್ ಕ್ರಿಸ್ಟಿಯಾನೋ ರೋನಾಲ್ಡೋ .

ಪೋರ್ಚುಗಲ್ ಹಾಗೂ ಅಲ್ಜಿರಿಯಾ ನಡುವಿನ ಅಭ್ಯಾಸ ಪಂದ್ಯದ ಬಳಿಕ ರೋನಾಲ್ಡೋ ಮಗ 7 ವರ್ಷದ ಜ್ಯೂನಿಯರ್ ರೋನಾಲ್ಡೋ ಕಾಲ್ಚೆಳಕ ತೋರಿದ್ದಾರೆ. ಅಪ್ಪನ ಹಾಗೇ ಅದ್ಬುತ ಫುಟ್ಬಾಲ್ ಕೌಶಲ್ಯಹೊಂದಿರುವ ಜ್ಯೂನಿಯರ್ ರೋನಾಲ್ಡೋ ಗೋಲಿನ ಮೂಲಕ ನೆರದಿದ್ದವರನ್ನ ಅಚ್ಚರಿಗೊಳಿಸಿದ್ದಾರೆ.

Scroll to load tweet…

ಅಲ್ಜಿರಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪೋರ್ಚುಗಲ್ 3-0 ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಮೈದಾನಕ್ಕೆ ಜ್ಯೂನಿಯರ್ ರೋನಾಲ್ಡೋ ಎಂಟ್ರಿಕೊಟ್ಟಿದ್ದಾರೆ. ಪೆನಾಲ್ಟಿ ಶೂಟೌಟ್ ಮೂಲಕ ಜ್ಯೂನಿಯರ್ ರೋನಾಲ್ಡೋ ಗೋಲು ಸಿಡಿಸಿದರು. 

ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ

ಜೂನ್ 14 ರಿಂದ ಫಿಫಾ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಪೋರ್ಚುಗಲ್ ಸೇರಿದಂತೆ 32 ತಂಡಗಳು ರಶ್ಯಾದಲ್ಲಿ ನಡೆಯಲಿರುವ ವಿಶ್ವ ಫುಟ್ಬಾಲ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದೆ.

ಫಿಫಾ ವಿಶ್ವಕಪ್ 2018ರಲ್ಲಿ ಯಾವೆಲ್ಲಾ ದಾಖಲೆಗಳು ನಿರ್ಮಾಣವಾಗಲಿದೆ?