ಮೆಕ್ಸಿಕೋ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುಂಡ ಜರ್ಮನಿಗೆ ಜು.23ರಂದು ನಡೆಯುವ ಎಫ್ ಗುಂಪಿನ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಗೆಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಟಗಾರರೂ ಒತ್ತಡದಲ್ಲಿದ್ದು, ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಸೋಚಿ: ಹಾಲಿ ಚಾಂಪಿಯನ್‌ ಜರ್ಮನಿ ಭಾರೀ ಒತ್ತಡಕ್ಕೆ ಸಿಲುಕಿದ್ದು, ಗುಂಪು ಹಂತದಿಂದಲೇ ಹೊರಬೀಳುವ ಭೀತಿ ಎದುರಿಸುತ್ತಿದೆ. ಶನಿವಾರ ಇಲ್ಲಿ ನಡೆಯಲಿರುವ ‘ಎಫ್‌’ ಗುಂಪಿನ ಪಂದ್ಯದಲ್ಲಿ ಸ್ವೀಡನ್‌ ವಿರುದ್ಧ ಸೆಣಸಲಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಐಲೆಂಡ್ ವಿರುದ್ಧ ನೈಜೇರಿಯಾ ಗೆಲವು

ಮೆಕ್ಸಿಕೋ ವಿರುದ್ಧ ಮೊದಲ ಪಂದ್ಯದಲ್ಲಿ 0-1 ಗೋಲಿನಿಂದ ಸೋಲುಂಡು ಆಘಾತ ಅನುಭವಿಸಿದ್ದ ಜರ್ಮನಿ, ಈ ಪಂದ್ಯದಲ್ಲಿ ತನ್ನ ತಾರಾ ಆಟಗಾರರಾದ ಥಾಮಸ್‌ ಮುಲ್ಲರ್‌, ಮೆಸುಟ್‌ ಓಜಿಲ್‌, ಮಾರಿಯೋ ಗೋಟ್ಜೆ, ಟೋನಿ ಕ್ರೂಸ್‌ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ.

ಫ್ರಾನ್ಸ್ ಹಾಗೂ ಪೆರು ಪಂದ್ಯದ ಇಂಟರೆಸ್ಟಿಂಗ್ ಕಹಾನಿ

ಗೋಲ್‌ ಕೀಪರ್‌ ಮ್ಯಾನುಯೆಲ್‌ ನೋಯರ್‌ ಸಹ ಕ್ಲೀನ್‌ ಶೀಟ್‌ ಪಡೆಯುವ ಒತ್ತಡದಲ್ಲಿದ್ದಾರೆ. ಮತ್ತೊಂದೆಡೆ ಸ್ವೀಡನ್‌ ಸತತ 2ನೇ ಗೆಲುವು ಸಾಧಿಸಿ, ಪ್ರಿ ಕ್ವಾರ್ಟರ್‌ಗೇರುವ ವಿಶ್ವಾಸದಲ್ಲಿದೆ.

ಅರ್ಜೆಂಟೈನ್ ಸೋಲನ್ನು ಬ್ರೆಜಿಲ್ ಅಭಿಮಾನಿಗಳು ಸಂಭ್ರಮಿಸಿದ್ದು ಹೀಗೆ

ಅರ್ಜೇಂಟೈನ್ ಸೋಲಿನ ಬಳಿಕೆ ಕೇರಳ ಅಭಿಮಾನಿ ಆತ್ಮಹತ್ಯೆ?