ಫಿಫಾ ವಿಶ್ವಕಪ್ 2018: ಐಸ್‌ಲೆಂಡ್ ವಿರುದ್ಧ ನೈಜೀರಿಯಾ ತಂಡಕ್ಕೆ ಗೆಲುವು

First Published 22, Jun 2018, 10:55 PM IST
FIFA World Cup 2018: Nigeria beat Iceland 2-0
Highlights

ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಸೋಲನ್ನೇ ಕಾಣದ ಐಸ್‌ಲೆಂಡ್ ತನ್ನ ದಾಖಲೆಯನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕನಿಷ್ಠ ಡ್ರಾ ಸಾಧಿಸುತ್ತಿದ್ದ ಐಸ್‌ಲೆಂಡ್, ನೈಜೀರಿಯಾ ವಿರುದ್ಧ ಗೆಲುವಿನ ಸಿಹಿ ಕಾಣಲಿಲ್ಲ. ಹೇಗಿತ್ತು ಈ ಪಂದ್ಯ. ಇಲ್ಲಿದೆ ಹೈಲೈಟ್ಸ್.

ರಷ್ಯಾ(ಜೂ.22): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ಗೆಲುವಿನ ನಗೆ ಬೀರಿದೆ.  ಅಹಮ್ಮದ್ ಮೂಸ ಸಿಡಿಸಿದ 2 ಗೋಲಿನ ನೆರವಿನಿಂದ ಐಸ್‌ಲೆಂಡ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ಗೆಲುವು ಕಂಡ 6 ಪಂದ್ಯಗಳು ಯುರೋಪಿಯನ್ ತಂಡದ ವಿರುದ್ಧ ಅನ್ನೋದು ವಿಶೇಷ 

49ನೇ ನಿಮಿಷದಲ್ಲಿ ಅಹಮ್ಮದ್ ಮೂಸ ಗೋಲು ಸಿಡಿಸೋ ಮೂಲಕ ನೈಜೀರಿಯಾ ತಂಡದ ಗೋಲಿನ ಖಾತೆ ತೆರೆದರು. ಐಸ್‌ಲೆಂಡ್ ಗೋಲು ಸಿಡಿಸಲು ತೀವ್ರ ಪ್ರಯತ್ನ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. 

ಮೊದಲ ಗೋಲು ಸಿಡಿಸಿದ ಅಹಮ್ಮದ್ ಮೂಸ, 75ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿದರು. ಈ ಮೂಲಕ ನೈಜೀರಿಯಾ 2-0 ಅಂತರದ ಮುನ್ನಡೆ ಪಡೆಯಿತು. ದ್ವಿತಿಯಾರ್ಧದಲ್ಲೂ ಐಸ್‌ಲೆಂಡ್ ಹೋರಾಟ ಪ್ರಯೋಜನವಾಗಲಿಲ್ಲ. ಹೀಗಾಗಿ ನೈಜೀರಿಯಾ 2-0 ಅಂತರದಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿತು.

loader