ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯ ಜಾಹೀರಾತು ಆಸಿಸ್ ಕ್ರಿಕೆಟಿಗರು ಹಾಗೂ ಅಭಿಮಾನಿಗಳನ್ನ ಕೆರಳಿಸಿದೆ. ಆಸ್ಟ್ರೇಲಿಯಾ ತಂಡವನ್ನ ತಮಾಷೆ ಮಾಡಿರುವ ಜಾಹೀರಾತು ವಿರುದ್ಧ ಸಿಡಿದೆದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ವಿರೇಂದ್ರ ಸೆಹ್ವಾಗ್‌ಗೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ(ಫೆ.13): ಭಾರತ-ಆಸ್ಪ್ರೇಲಿಯಾ ನಡುವಿನ ಟಿ20 ಮತ್ತು ಏಕದಿನ ಸರಣಿಯ ಪ್ರಚಾರಕ್ಕಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹೊಸ ಜಾಹೀರಾತೊಂದನ್ನು ಪ್ರಸಾರ ಮಾಡುತ್ತಿದ್ದು, ಅದರಲ್ಲಿ ವೀರೇಂದ್ರ ಸೆಹ್ವಾಗ್ ಆಸ್ಪ್ರೇಲಿಯನ್ನರನ್ನು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: 2021ರ ಏಕದಿನ ವಿಶ್ವಕಪ್: ಭಾರತಕ್ಕಿಲ್ಲ ನೇರ ಪ್ರವೇಶ?
ಈ ಜಾಹೀರಾತು ಆಸ್ಪ್ರೇಲಿಯಾದ ಮಾಜಿ ಆರಂಭಿಕ ದಾಂಡಿಗ ಮ್ಯಾಥ್ಯೂ ಹೇಡನ್‌ಗೆ ಸಿಟ್ಟು ತರಿಸಿದೆ. ‘ನಾವು ಆಸ್ಪ್ರೇಲಿಯಾಗೆ ಹೋಗಿದ್ದಾಗ ನಮಗೆ ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಲಾಯಿತು. ಈಗ ಆಸ್ಪ್ರೇಲಿಯನ್ನರು ಭಾರತ ಪ್ರವಾಸ ಕೈಗೊಳ್ಳುತ್ತೇವೆ ಎಂದಾಗ ಕುಟುಂಬ ಸಮೇತ ಬನ್ನಿ, ನಾವು ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ ಎಂದು ಆಹ್ವಾನ ನೀಡಿದ್ದೇವೆ’ ಎಂದು ಸೆಹ್ವಾಗ್ ಜಾಹೀರಾತಿನಲ್ಲಿ ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: 2019ರ ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಶೇನ್ ವಾರ್ನ್!
ಇದಕ್ಕೆ ಪ್ರತಿಕ್ರಿಯಿಸಿರುವ ಹೇಡನ್, ‘ಆಸ್ಪ್ರೇಲಿಯಾ ಕ್ರಿಕೆಟಿಗರನ್ನು ಎಂದಿಗೂ ಕಡೆಗಣಿಸಬೇಡಿ. ವಿಶ್ವಕಪ್ ಟೂರ್ನಿಯಲ್ಲಿ ಯಾರು ಮಕ್ಕಳು ಅನ್ನೋದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ಇದೀಗ ವಾಹಿನಿಯ ಜಾಹೀರಾತು ಸೆಹ್ವಾಗ್ ಹಾಗೂ ಹೇಡನ್ ನಡುವೆ ಸಮರಕ್ಕೆ ಕಾರಣಾಗಿದೆ.
