Asianet Suvarna News Asianet Suvarna News

ಮಿಯಾಮಿ ಓಪನ್‌: ಫೈನಲ್‌ ಪ್ರವೇಶಿಸಿದ ರೋಜರ್‌ ಫೆಡರರ್‌

ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್‌ ಟೂರ್ನಿಯ ಫೈನಲ್‌ಗೆ ಫೆಡರರ್‌ ಪ್ರವೇಶ ಪಡೆದಿದ್ದಾರೆ. ಸ್ವಿಸ್‌ ದೊರೆ ಫೆಡರರ್‌ ಪಾಲಿಗಿದು 50ನೇ ಎಟಿಪಿ ಮಾಸ್ಟ​ರ್ಸ್ ಫೈನಲ್‌ ಆಗಿದೆ.

Federer Routs Shapovalov To Reach Miami Final
Author
Miami, First Published Mar 31, 2019, 11:21 AM IST

ಮಿಯಾಮಿ: ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ ವೃತ್ತಿಬದುಕಿನ 101ನೇ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದಾರೆ. 

ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್‌ ಟೂರ್ನಿಯ ಫೈನಲ್‌ಗೆ ಫೆಡರರ್‌ ಪ್ರವೇಶ ಪಡೆದಿದ್ದಾರೆ. ಸ್ವಿಸ್‌ ದೊರೆ ಫೆಡರರ್‌ ಪಾಲಿಗಿದು 50ನೇ ಎಟಿಪಿ ಮಾಸ್ಟ​ರ್ಸ್ ಫೈನಲ್‌ ಆಗಿದೆ. 

100 ಪ್ರಶಸ್ತಿ ಗೆದ್ದ ಸ್ವಿಸ್ ದಿಗ್ಗಜ ಫೆಡರರ್

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಕೆನಡಾದ 19 ವರ್ಷದ ಡೆನಿಸ್‌ ಶಾಪೋವಲೊವ್‌ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫೆಡರರ್‌, ಅಮೆರಿಕದ ಜಾನ್‌ ಇಸ್ನರ್‌ ವಿರುದ್ಧ ಸೆಣಸಲಿದ್ದಾರೆ.

Follow Us:
Download App:
  • android
  • ios