Asianet Suvarna News Asianet Suvarna News

100 ಪ್ರಶಸ್ತಿ ಗೆದ್ದ ಸ್ವಿಸ್ ದಿಗ್ಗಜ ಫೆಡರರ್

ಈ ವರ್ಷ ಆಸ್ಟ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಟಿಟ್ಸಿಪಾಸ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಫೆಡರರ್, ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಗೆಲುವನ್ನು ಅವಿಸ್ಮರಣೀಯ ಗೊಳಿಸಿಕೊಂಡರು.

Roger Federer happy to join Jimmy Connors in 100 ATP titles club
Author
Dubai - United Arab Emirates, First Published Mar 3, 2019, 3:32 PM IST

ದುಬೈ(ಮಾ.03): ಟೆನಿಸ್ ಮಾಂತ್ರಿಕ, ಸ್ಪಿಜರ್‌ಲೆಂಡ್‌ನ ರೋಜರ್ ಫೆಡರರ್ ತಮ್ಮ ವೃತ್ತಿಬದುಕಿನ 100ನೇ ಪ್ರಶಸ್ತಿ ಜಯಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ದುಬೈ ಓಪನ್ ಫೈನಲ್'ನಲ್ಲಿ ಗ್ರೀಸ್‌ನ ಯುವ ಆಟಗಾರ ಸ್ಟೆಫಾನೋ ಟಿಟ್ಸಿಪಾಸ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಿಸಿದ ಫೆಡರರ್, ಪ್ರಶಸ್ತಿಗಳ ಶತಕ ಬಾರಿಸಿದರು. ಈ ಮೂಲಕ 100 ಪ್ರಶಸ್ತಿ ಮೈಲಿಗಲ್ಲು ತಲುಪಿದ ವಿಶ್ವದ 2ನೇ ಟೆನಿಸಿಗ ಎನ್ನುವ ದಾಖಲೆಯನ್ನು ರೋಜರ್ ಬರೆದರು. ಅಮೆರಿಕದ ದಿಗ್ಗಜ ಜಿಮ್ಮಿ ಕಾನ್ಸರ್ 109 ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಈ ವರ್ಷ ಆಸ್ಟ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಟಿಟ್ಸಿಪಾಸ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಫೆಡರರ್, ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಗೆಲುವನ್ನು ಅವಿಸ್ಮರಣೀಯ ಗೊಳಿಸಿಕೊಂಡರು. 1998ರಲ್ಲಿ ವೃತ್ತಿಪರ ಟೆನಿಸಿಗನಾದ ಫೆಡರರ್, 2001ರಲ್ಲಿ ಮಿಲಾನ್ ಒಳಾಂಗಣ ಟೂರ್ನಿ ಗೆಲ್ಲುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಬಳಿಕ 2003ರಲ್ಲಿ ವಿಂಬಲ್ಡನ್ ಗೆಲ್ಲುವ ಮೂಲಕ ಫೆಡರರ್ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್ ಆಗಿದ್ದರು. 

Follow Us:
Download App:
  • android
  • ios