ಮುಂಬೈ(ಮಾ.13): 2ನೇ ಬಾರಿ ಐಎಸ್‌ಎಲ್‌ ಫೈನಲ್‌ಗೇರಿರುವ ಬೆಂಗಳೂರು ಎಫ್‌ಸಿ ತಂಡ ಪ್ರಶಸ್ತಿಗಾಗಿ ಗೋವಾ ಎಫ್‌ಸಿ ವಿರುದ್ಧ ಸೆಣಸಾಡಲಿದೆ. 

ISL Football: ಸತತ 2ನೇ ಬಾರಿ ಫೈನಲ್ ತಲುಪಿದ ಬೆಂಗಳೂರು!

5ನೇ ಆವೃತ್ತಿಯ 2ನೇ ಸೆಮಿಫೈನಲ್‌ನಲ್ಲಿ ಗೋವಾ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಒಟ್ಟಾರೆ 5-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೇರಿತು. ಮುಂಬೈನಲ್ಲಿ ನಡೆದಿದ್ದ ಮೊದಲ ಚರಣದ ಪಂದ್ಯದಲ್ಲಿ 5-1 ಗೋಲುಗಳಿಂದ ಗೆದ್ದು ಬೀಗಿದ್ದ ಗೋವಾ, ಮಂಗಳವಾರ ಗೋವಾದಲ್ಲಿ ನಡೆದ 2ನೇ ಚರಣದ ಪಂದ್ಯದಲ್ಲಿ 0-1 ಗೋಲುಗಳಿಂದ ಸೋಲುಂಡಿತು. ಮೊದಲ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಜಯಿಸಿದ್ದು ಗೋವಾ ತಂಡಕ್ಕೆ ನೆರವಾಯಿತು. 

ಭಾನುವಾರ (ಮಾ.17) ಮುಂಬೈನ ಫುಟ್ಬಾಲ್‌ ಅರೆನಾದಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಲು ಸೆಣಸಲಿವೆ. ಈ ಆವೃತ್ತಿಯಲ್ಲಿ ಗೋವಾ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಬಿಎಫ್‌ಸಿ ಜಯಿಸಿತ್ತು.