ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮತ್ತೆ ಟ್ರೋಲಿಗರ ಆಹಾರವಾಗಿದ್ದಾರೆ. ಶಾಸ್ತ್ರಿ ಏನೇ ಫೋಟೋ ಹಾಕಿದರೂ ಅದನ್ನು ಎಡಿಟ್ ಮಾಡಿ, ಕೈಯಲ್ಲಿ ಮದ್ಯ ಹಿಡಿದಿರುವ ಅಥವಾ ಕುಡಿಯುತ್ತಿರುವ ಫೋಟೋ ಹಾಕಿ ಟೋಲ್ ಮಾಡಲಾಗುತ್ತೆ. ಇದೀಗ ರವಿ ಶಾಸ್ತ್ರಿ ಕೊಂಚ ಭಿನ್ನವಾಗಿ ಪೋಟೋ ಅಪ್‌ಲೋಡ್ ಮಾಡಿದ್ದು, ಮತ್ತೆ ಟ್ರೋಲ್ ಮಾಡಲಾಗಿದೆ.

ಕಿಂಗ್ಸ್‌ಸ್ಟನ್(ಸೆ.05): ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುತ್ತಿರುವ ವ್ಯಕ್ತಿಗಳಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮೊದಲ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರವಿ ಶಾಸ್ತ್ರಿ ಬೀಚ್ ಬದಿಯಲ್ಲಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೇ ಫೋಟೋವನ್ನು ಎಡಿಟ್ ಮಾಡಿದ ಟ್ರೋಲಿಗರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದಿರುವ ಶಾಸ್ತ್ರಿ ಫೋಟೋವನ್ನು ಹಾಕಿ ಟ್ರೋಲ್ ಮಾಡಲಾಗಿತ್ತು. ಇದೀಗ ಹಳೇ ಟ್ರೋಲಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಟ್ವಿಟರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

Scroll to load tweet…

ಇದನ್ನೂ ಓದಿ: ಕೆರಿಬಿಯನ್ ಬೀಚ್‌ನಲ್ಲಿ ಶಾಸ್ತ್ರಿ ರಿಲ್ಯಾಕ್ಸ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ರವಿ ಶಾಸ್ತ್ರಿ ಬೀಚ್ ಬದಿಯಲ್ಲಿನ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಸೂರ್ಯನ ಕಿರಣ ಸ್ಪರ್ಶಿಸಿರುವ ಜಮೈಕಾ, ನನ್ನ ಎಡಗೈಯಲ್ಲಿ ಮಧುರ ಪಾನಕ ಎಂದು ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ಶಾಸ್ತ್ರಿ ಈ ಪೋಟೋ ಅಪ್‌ಲೋಡ್ ಮಾಡುತ್ತಿದ್ದಂತೆ ಟ್ವಿಟರಿಗರು ಮತ್ತೆ ಟ್ರೋಲ್ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ