ಫೋಟೋ ಶೇರ್ ಮಾಡಿದ ಹಫೀಜ್; ಕೊಹ್ಲಿ ನಕಲು ಮಾಡಬೇಡಿ ಎಂದ ಫ್ಯಾನ್ಸ್
ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಹಫೀಜ್ ಫೋಟೋ ಇದೀಗ ಟ್ರೋಲ್ ಆಗಿದೆ. ವಿರಾಟ್ ಕೊಹ್ಲಿಯನ್ನು ಕಾಪಿ ಮಾಡಬೇಡಿ ಎಂದು ಟ್ರೋಲ್ ಮಾಡಲಾಗುತ್ತಿದೆ.
ಸೈ.ಲೂಸಿಯ(ಸೆ.24): ಪಾಕಿಸ್ತಾನ ಹಿರಿಯ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಕ್ರಿಕೆಟ್ ಕರಿಯರ್ ಅಂತ್ಯದಲ್ಲಿದ್ದಾರೆ. ಸದ್ಯದಲ್ಲಿ 39ನೇ ವಸಂತಕ್ಕೆ ಕಾಲಿಡಲಿರುವ ಹಫೀಜ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಹಫೀಜ್, ಪಂದ್ಯಕ್ಕೂ ಮುನ್ನ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಈ ವೇಳೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಟ್ರೋಲ್ ಆಗಿದೆ.
ಇದನ್ನೂ ಓದಿ: ಪಾಕಿಸ್ತಾನ ಜೊತೆ ಕ್ರಿಕೆಟ್ ಸರಣಿಗೆ ಭಾರತ ರೆಡಿ; ಆದರೆ 1 ಕಂಡೀಷನ್!
ಸ್ವಿಮ್ಮಿಂಗ್ ಪೂಲ್‌ನಲ್ಲಿ ರಿಲ್ಯಾಕ್ಸ್ ಸೆಶನ್ ಫೋಟೋವನ್ನು ಹಫೀಜ್ ಹಂಚಿಕೊಂಡಿದ್ದಾರೆ. ಶರ್ಟ್ ಲೆಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಣ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೀತಿ ಶರ್ಟ್ ಬಿಚ್ಚಿ ಫೋಸ್ ಕೊಡಬೇಡಿ, ಕೊಹ್ಲಿ ರೀತಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಮೊಹಮ್ಮದ್ ಹಫೀಜ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೈಂಟ್ ಕಿಟ್ಟಿಸ್ ತಂಡದ ಪರ ಆಡುತ್ತಿದ್ದಾರೆ. ಕಾರ್ಲೋಸ್ ಬ್ರಾಥ್ವೈಟ್ ನಾಯಕತ್ವದ ಈ ತಂಡದಲ್ಲಿ ಹಫೀಜ್ ಮಿಂಚಿನ ಪ್ರದರ್ಶನ ನೀಡಿಲ್ಲ. ಜಮೈಕಾ ತಲ್ವಾಸ್ ವಿರುದ್ಧ ಸಿಡಿಸಿದದ 37 ರನ್ ಹೊರತು ಪಡಿಸಿದರೆ ಇನ್ಯಾವ ಪಂದ್ಯದಲ್ಲೂ ಅಬ್ಬರಿಸಿಲ್ಲ. ಇದೀಗ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಸೈಂಟ್ ಲೂಸಿಯಾ ಜೊಕಸ್ ತಂಡವನ್ನು ಎದುರಿಸಲಿದೆ.
ಸೈಂಟ್ ಲುಸಿಯಾದಲ್ಲಿ ಬೀಡುಬಿಟ್ಟಿರುವ ಮೊಹಮ್ಮದ್ ಹಫೀಜ್ ಹಾಗೂ ತಂಡ ಹೊಟೆಲ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿಶ್ರಾಂತಿಗೆ ಜಾರಿತ್ತು. ಹಫೀಜ್ ರಿಲ್ಯಾಕ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.