ಪಾಕಿಸ್ತಾನ ಜೊತೆ ಕ್ರಿಕೆಟ್ ಸರಣಿಗೆ ಭಾರತ ರೆಡಿ; ಆದರೆ 1 ಕಂಡೀಷನ್!
ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ರೆಡಿ ಎಂದು ಬಿಸಿಸಿಐ COA ವಿನೋದ್ ರೈ ಹೇಳಿದ್ದಾರೆ. ದಿಢೀರ್ ಹೇಳಿಕೆ ಪಾಕಿಸ್ತಾನದ ಸಂತಸವನ್ನು ಇಮ್ಮಡಿಗೊಳಿಸಿದೆ. ಆದರೆ ಸರಣಿ ಆಯೋಜನಗೆ ಭಾರತ ಒಂದು ಷರತ್ತು ವಿಧಿಸಿದೆ.
ನವದೆಹಲಿ(ಸೆ.23): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಸದ್ಯ ಐಸಿಸಿ ಟೂರ್ನಿಗೆ ಮಾತ್ರ ಸೀಮಿತವಾಗಿದೆ. ಭಾರತದ ಜೊತೆಗಿನ ದ್ವಿಪಕ್ಷೀಯ ಸರಣಿ ಇನ್ನಿಲ್ಲದ ಕಸರತ್ತು ಮಾಡಿ ಕೊನೆಗೆ ಕೈಚೆಲ್ಲಿತು ಕೂತಿದೆ. ಇದೀಗ ಇಂಡೋ-ಪಾಕ್ ಸರಣಿ ಮಾತುಕತೆ ಶಾಂತವಾಗಿರುವಾಗಲೆ ಬಿಸಿಸಿಐ ಹೊಸ ಬಾಂಬ್ ಹಾಕಿದೆ. ಪಾಕ್ ವಿರುದ್ದ ಕ್ರಿಕೆಟ್ ಸರಣಿಗೆ ಭಾರತ ಬದ್ಧ ಎಂದಿದೆ.
ಇದನ್ನೂ ಓದಿ: ಬದ್ಧವೈರಿ ಪಾಕ್ ಮಣಿಸಿ ಸೇಡು ತೀರಿಸಿಕೊಂಡ ಭಾರತ!
2012-13ರಲ್ಲಿ ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡಿತ್ತು. ಇದಾದ ಬಳಿಕ ಉಭಯ ದೇಶದ ನಡುವಿನ ಸಂಬಂಧ ಮತ್ತಷ್ಟು ಹಳಸಿತು. ಅದರಲ್ಲೂ 2019ರ ಪುಲ್ವಾಮಾ ದಾಳಿಯ ಬಳಿಕ ಐಸಿಸಿ ಟೂರ್ನಿಗಳಿಂದಲೂ ಪಾಕಿಸ್ತಾನ ಜೊತೆ ಪಂದ್ಯ ಬಹಿಷ್ಕರಿಸಲು ಒತ್ತಡ ಕೇಳಿ ಬಂದಿತ್ತು. ಇದೀಗ ಎಲ್ಲಾ ಘಟನೆಗಳು ತಣ್ಣಗಾಗುತ್ತಿರುವಾಗಲೇ ಬಿಸಿಸಿಐ COA ವಿನೋದ್ ರೈ, ಪಾಕ್ ಜೊತೆಗಿನ ಕ್ರಿಕೆಟ್ ಸರಣಿಗೆ ರೆಡಿ. ಆದರೆ ತಟಸ್ಥ ಸ್ಥಳದಲ್ಲಿ ಮಾತ್ರ ಎಂದು ಕಂಡೀಷನ್ ಹಾಕಿದೆ.
ಕೇಂದ್ರ ಸರ್ಕಾರ ತಟಸ್ಥ ಸ್ಥಳದಲ್ಲಿ ಸರಣಿ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವಿನೋದ್ ರೈ ಹೇಳಿದ್ದಾರೆ. ಆದರೆ ಈ ಹಿಂದೆಯೇ ಪಾಕಿಸ್ತಾನ ಯಾವುದೇ ತಟಸ್ಥ ಸ್ಥಳದಲ್ಲಿ ಸರಣಿ ಆಯೋಜಿಸಲು ಪಾಕಿಸ್ತಾನ ಮುಂದಾಗಿತ್ತು. ಭಾರತ ಆಯ್ಕೆ ಮಾಡಿದ ಯಾವುದೇ ದೇಶದಲ್ಲಿ ಪಾಕಿಸ್ತಾನ ಸರಣಿಗೆ ಸಮ್ಮತಿಸಲಿದೆ ಎಂದಿತ್ತು. ಈ ಹಿಂದಿನ ಇಂಡೋ-ಪಾಕ್ ಸರಣಿ ಮಾತುಕತೆ ಕುರಿತು ಯಾವುದೇ ವಿಚಾರ ತಿಳಿದುಕೊಳ್ಳದೆ ಹೇಳಿಕೆ ನೀಡಿದಂತಿದೆ. ಇಷ್ಟೇ ಅಲ್ಲ ಈ ಹಿಂದೆ ಕೇಂದ್ರ ಸರ್ಕಾರವೇ ಇಂಡೋ-ಪಾಕ್ ಸರಣಿಗೂ ಮುನ್ನ ಭಯೋತ್ಪಾದನಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಿ ಎಂದು ತಾಕೀತು ಮಾಡಿತ್ತು.