ಧರ್ಮಶಾಲಾ(ಸೆ.16): ಟ್ರೋಲಿಗರಿಗೆ ಹೆಚ್ಚು ಆಹಾರವಾಗಿರುವ ವ್ಯಕ್ತಿಗಳ ಪೈಕಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮುಂಚೂಣಿಯಲ್ಲಿದ್ದಾರೆ. ಶಾಸ್ತ್ರಿ ಎಲ್ಲೋ ಹೋದರೂ, ಏನೇ ಮಾಡಿದರೂ ಟ್ರೋಲ್ ಆಗ್ತಾರೆ. ಪಂದ್ಯ ಗೆದ್ದರೂ, ಸೋತರೂ ಮೊದಲು ಗುರಿಯಾಗುವುದು ಶಾಸ್ತ್ರಿ. ಧರ್ಮಶಾಲಾದ ಮೊದಲ ಟಿ20 ಪಂದ್ಯಕ್ಕೂ ಮುನ್ನ ರವಿ ಶಾಸ್ತ್ರಿ ಶೇರ್ ಮಾಡಿರುವ ಫೋಟೋ ಇದೀಗ ಟ್ರೋಲ್ ಆಗಿದೆ.

ಇದನ್ನೂ ಓದಿ: ಟ್ರೋಲಿಗರಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಕ್ಲಾಸ್!

ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಜೊತೆ ರವಿ ಶಾಸ್ತ್ರಿ ಕಾಫಿ ಕುಡಿಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾಫಿ ಕಪ್ ಒಳಗಡೆ ಏನಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಟೀಂ ಇಂಡಿಯಾದಲ್ಲಿ ಕಾಫಿ ಮಾಡಿದ ಆವಾಂತರ ಗೊತ್ತಿದೆಯಲ್ವಾ ಎಂದು ಟ್ರೋಲಿಗರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗಿಯರ ಜೊತೆ ಪೋಸ್- ಕೋಚ್ ರವಿ ಶಾಸ್ತ್ರಿಗೆ ಫುಲ್ ಕ್ಲಾಸ್!