ತಂಡಕ್ಕೆ ವಾಪಸಾದ ಡುಪ್ಲೆಸಿ, ಎಬಿಡಿ

First Published 25, Feb 2018, 8:19 PM IST
Faf Du Plessis doubtful AB De Villiers likely to return for Australia Test
Highlights

ಭಾರತ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಹೇನ್‌ರಿಚ್ ಕ್ಲಾಸೆನ್ ಟೆಸ್ಟ್ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಜೊಹಾನ್ಸ್‌ಬರ್ಗ್(ಫೆ.25): ಮಾ.1ರಿಂದ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ದ. ಆಫ್ರಿಕಾ ತಂಡ ಪ್ರಕಟಗೊಂಡಿದೆ.

ಗಾಯಗೊಂಡು ಭಾರತ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಬಿದ್ದಿದ್ದ ನಾಯಕ ಫಾಫ್ ಡು ಪ್ಲೆಸಿ ತಂಡಕ್ಕೆ ಮರಳಿದ್ದಾರೆ. ಎಡ ಮಂಡಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಎಬಿ ಡಿವಿಲಿಯರ್ಸ್‌ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಭಾರತ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಹೇನ್‌ರಿಚ್ ಕ್ಲಾಸೆನ್ ಟೆಸ್ಟ್ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ತಂಡ: ಫಾಫ್ ಡು ಪ್ಲೆಸಿ (ನಾಯಕ), ಹಾಶೀಂ ಆಮ್ಲಾ, ತೆಂಬ ಬವುಮಾ, ಕ್ವಿಂಟನ್ ಡಿ ಕಾಕ್, ಡಿ ಬ್ರುನ್, ಎಬಿ ಡಿವಿಲಿಯರ್ಸ್‌, ಡೀನ್ ಎಲ್ಗಾರ್, ಹೇನ್ ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಾರ್ಕ್‌ರಮ್, ಮೊರ್ನೆ ಮಾರ್ಕೆಲ್, ವಿಯಾನ್ ಮಲ್ಡರ್, ಎನ್‌ಗಿಡಿ, ವರ್ನೊನ್ ಫಿಲಾಂಡರ್, ಕಗಿಸೊ ರಬಾಡ.

loader