ಎಫ್‌ 1 ದಿಗ್ಗಜ ಲೂಯಿಸ್ ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ..! ವಿಡಿಯೋ ವೈರಲ್

ಹ್ಯಾಮಿಲ್ಟನ್‌ರನ್ನು ಭೇಟಿಯಾಗಿರುವ ಯುವತಿಯೊಬ್ಬರು ‘ಗುಡ್​ ಲಕ್’ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಫಲಕ​ವೊಂದನ್ನು ಹ್ಯಾಮಿಲ್ಟನ್​ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು, ಈ ಪದವನ್ನು ಹ್ಯಾಮಿಲ್ಟನ್ ಬಾಯಿಯಿಂದ ಹೇಳಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.

F1 Legend Lewis Hamilton Speaks Kannada Video goes viral kvn

ಲಂಡನ್‌: 7 ಬಾರಿ ಫಾರ್ಮುಲಾ-1 ಚಾಂಪಿಯನ್, ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್‌ ಅವರ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿರುವ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. 

ಹ್ಯಾಮಿಲ್ಟನ್‌ರನ್ನು ಭೇಟಿಯಾಗಿರುವ ಯುವತಿಯೊಬ್ಬರು ‘ಗುಡ್​ ಲಕ್’ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಫಲಕ​ವೊಂದನ್ನು ಹ್ಯಾಮಿಲ್ಟನ್​ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು, ಈ ಪದವನ್ನು ಹ್ಯಾಮಿಲ್ಟನ್ ಬಾಯಿಯಿಂದ ಹೇಳಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ. ‘ಒಳ್ಳೆಯದಾಗಲಿ’ ಎಂದು ಉಚ್ಚರಿಸಿರುವ ಹ್ಯಾಮಿಲ್ಟನ್‌, ಇದು ನನ್ನ ಬಾಯಲ್ಲಿ ಬಂದ ಮೊದಲ ಕನ್ನಡ ಪದ ಎಂದು ಖುಷಿ ಪಟ್ಟಿದ್ದಾರೆ.

ಹೀಗಿದೆ ನೋಡಿ ಆ ವಿಡಿಯೋ:

ಕುಸ್ತಿ ಫೆಡರೇಶನ್‌ ಮೇಲಿನ ಅಮಾನತು ಶೀಘ್ರ ತೆರವು?

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನ ಚುನಾಯಿತ ಆಡಳಿತದ ಮೇಲೆ ಹೇರಿರುವ ಅಮಾನತ್ತನ್ನು ಕೇಂದ್ರ ಕ್ರೀಡಾ ಸಚಿವಾಲಯ ಶೀಘ್ರ ತೆರವುಗೊಳಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರಣಜಿ ಟ್ರೋಫಿ ಸೆಮಿಫೈನಲ್‌: ಮುಂಬೈ, ಮಧ್ಯಪ್ರದೇಶ ಮೇಲುಗೈ

ವಿಶ್ವ ಕುಸ್ತಿ ಒಕ್ಕೂಟ ಡಬ್ಲ್ಯುಎಫ್‌ಐ ಮೇಲಿನ ನಿಷೇಧ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಕುಸ್ತಿಪಟುಗಳ ಆಯ್ಕೆ ಸೇರಿ ದೈನಂದಿನ ಚಟುವಟಿಕೆಗಳನ್ನು ಚುನಾಯಿತ ಆಡಳಿತವೇ ನಡೆಸಬೇಕಿದೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಕುಸ್ತಿಪಟುಗಳನ್ನು ಆಯ್ಕೆ ಮಾಡಲು ನಡೆಸಬೇಕಿರುವ ಆಯ್ಕೆ ಟ್ರಯಲ್ಸ್‌ ಆಯೋಜಿಸಲು ಸಂಜಯ್‌ ಸಿಂಗ್‌ ನೇತೃತ್ವದ ಆಡಳಿತ ಮಂಡಳಿಗೇ ಅವಕಾಶ ನೀಡಲು ಸಚಿವಾಲಯ ನಿರ್ಧರಿಸಿದೆ ಎನ್ನಲಾಗಿದೆ.

ಸಂತೋಷ್‌ ಟ್ರೋಫಿ: ಕೊನೆ ಪಂದ್ಯದಲ್ಲೂ ರಾಜ್ಯಕ್ಕಿಲ್ಲ ಜಯ

ಯೂಪಿಯಾ: 77ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಒಂದೂ ಗೆಲುವು ಕಾಣದೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. ಫೈನಲ್‌ ಹಂತದ ‘ಬಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಶನಿವಾರ ಕರ್ನಾಟಕ 1-4 ಗೋಲುಗಳ ಅಂತರದಲ್ಲಿ ಮಹಾರಾಷ್ಟ್ರ ವಿರುದ್ಧ ಸೋಲುಂಡಿತು. ಇದರೊಂದಿಗೆ ಗುಂಪಿನಲ್ಲಿ ಕೊನೆ ಸ್ಥಾನಿಯಾಗಿಯೇ ಉಳಿಯಿತು. ಮೊದಲೆರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ, ಕೊನೆಯ 3 ಪಂದ್ಯಗಳಲ್ಲಿ ಸೋಲುಂಡು ನಿರಾಸೆ ಅನುಭವಿಸಿತು.

Latest Videos
Follow Us:
Download App:
  • android
  • ios