ಹೈದರಾಬಾದ್‌(ಮಾ.04): ಭಾರತ ತಂಡ ಮಾಜಿ ನಾಯಕ ಎಂ.ಎಸ್‌.ಧೋನಿ ಹಲವು ಕ್ರಿಕೆಟಿಗರಿಗೆ ಸ್ಫೂರ್ತಿ. ಅನೇಕರ ಕ್ರಿಕೆಟ್‌ ಬದುಕಿನಲ್ಲಿ ಧೋನಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೀಗ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌, ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯವನ್ನು ಧೋನಿಗೆ ನೀಡಿದ್ದಾರೆ. 

ಆಸಿಸ್ ಗೆಲುವಿಗೆ ತಣ್ಣೀರೆರಚಿದ ಧೋನಿ-ಜಾಧವ್

ಆಸೀಸ್‌ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನದಲ್ಲಿ ಧೋನಿ ಜತೆ ಸೇರಿ 5ನೇ ವಿಕೆಟ್‌ಗೆ 141 ರನ್‌ ಜೊತೆಯಾಟವಾಡಿದ ಜಾಧವ್‌, ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಬಳಿಕ ತಮ್ಮ ಸಹ ಆಟಗಾರ ಯಜುವೇಂದ್ರ ಚಹಲ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಜಾಧವ್‌, ‘ಧೋನಿ ಏನು ಹೇಳುತ್ತಾರೋ ಅದನ್ನು ನಾನು ಪಾಲಿಸುತ್ತೇನೆ. ಅವರ ಮಾತು ಕೇಳಿದರೆ ಖಂಡಿತ ಯಶಸ್ಸು ಸಿಗಲಿದೆ. ಅವರು ನನ್ನ ಮುಂದಿರುವಾಗ ನಾನು ಯಾವುದೇ ಸವಾಲಿಗೂ ಹೆದರುವುದಿಲ್ಲ. ಅವರಿದ್ದರೆ ಎಲ್ಲವೂ ತಾನಾಗೇ ನಡೆಯುತ್ತದೆ’ ಎಂದು ಹೇಳಿದ್ದಾರೆ.

ICC ಕೊಟ್ಟ ಎಚ್ಚರಿಕೆ ಮರೆತ ಆಸಿಸ್: ವಿಕೆಟ್’ಕೀಪಿಂಗ್’ನಲ್ಲಿ ಧೋನಿಯೇ ಬಾಸ್..!

ಆಸ್ಟ್ರೇಲಿಯಾ ನೀಡಿದ್ದ 237 ರನ್’ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 99 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜತೆಯಾದ ಜಾಧವ್-ಧೋನಿ 5ನೇ ವಿಕೆಟ್’ಗೆ ಮುರಿಯದ 141 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೇದಾರ್ ಜಾಧವ್ 87 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 81 ರನ್ ಬಾರಿಸಿದರೆ, ಧೋನಿ 72 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಬಾರಿಸಿದರು.