ICC ಕೊಟ್ಟ ಎಚ್ಚರಿಕೆ ಮರೆತ ಆಸಿಸ್: ವಿಕೆಟ್’ಕೀಪಿಂಗ್’ನಲ್ಲಿ ಧೋನಿಯೇ ಬಾಸ್..!

ತಮ್ಮ ಚಾಣಾಕ್ಷ ವಿಕೆಟ್’ಕೀಪಿಂಗ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳನ್ನು ತಬ್ಬಿಬ್ಬುಗೊಳಿಸಿರುವ ಧೋನಿ, 37 ವರ್ಷವಾದರೂ ವಿಕೆಟ್ ಹಿಂದಿನ ಚುರುಕುತನ ಕಮ್ಮಿಯಾಗಿಲ್ಲ. ಧೋನಿ, ಆಸಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಚುರುಕಿನ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ.

Once again MS Dhoni proves boss in behind the stump

ಹೈದರಾಬಾದ್[ಮಾ.02]: ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದಿರುವಾಗ ಕ್ರೀಸ್ ತೊರೆಯಬೇಡಿ ಎಂದು ICC ನೀಡಿದ್ದ ಎಚ್ಚರಿಯನ್ನು ಮರೆತ ಆಸ್ಟ್ರೇಲಿಯಾ ತಂಡದ ಪೀಟರ್ ಹ್ಯಾಂಡ್ಸ್’ಕಂಬ್ ಕೊನೆಗೂ ಬೆಲೆ ತೆತ್ತಿದ್ದಾರೆ. ಈ ಮೂಲಕ ಧೋನಿ ವಿಕೆಟ್ ಹಿಂದೆ ತಾವೇ ಬಾಸ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಧೋನಿ ಇರುವಾಗ ಗೆರೆ ದಾಟಬೇಡಿ: ಇದು ICC ನೀಡಿದ ಎಚ್ಚರಿಕೆ..!

ತಮ್ಮ ಚಾಣಾಕ್ಷ ವಿಕೆಟ್’ಕೀಪಿಂಗ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳನ್ನು ತಬ್ಬಿಬ್ಬುಗೊಳಿಸಿರುವ ಧೋನಿ, 37 ವರ್ಷವಾದರೂ ವಿಕೆಟ್ ಹಿಂದಿನ ಚುರುಕುತನ ಕಮ್ಮಿಯಾಗಿಲ್ಲ. ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ಸ್ಟಂಪಿಂಗ್[120] ಮಾಡಿ ವಿಶ್ವದಾಖಲೆ ಬರೆದಿರುವ ಧೋನಿ, ಆಸಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಚುರುಕಿನ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಪಂದ್ಯದಲ್ಲಿ ಮುಗ್ಗರಿಸಿದರೂ ಧೋನಿ ಶ್ಲಾಘಿಸಿದ ಬಿಸಿಸಿಐ !

ಇನ್ನು ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಏಕದಿನ ಸರಣಿಗೆ ತಂಡ ಕೂಡಿಕೊಂಡಿದ್ದಾರೆ. ಕುಲ್ದೀಪ್ ಎಸೆದ 30ನೇ ಓವರ್’ನಲ್ಲಿ ಆಸಿಸ್ ಬ್ಯಾಟ್ಸ್’ಮನ್ ಪೀಟರ್ ಹ್ಯಾಂಡ್ಸ್’ಕಂಬ್ ಮುನ್ನುಗ್ಗಿ ಬಾರಿಸಲು ಯತ್ನಿಸಿದರು. ಆದರೆ ಬ್ಯಾಟ್ ವಂಚಿಸಿದ ಬಾಲ್ ಧೋನಿ ಕೈ ಸೇರಿತು. ತಡ ಮಾಡದ ಧೋನಿ ಬೇಲ್ಸ್ ಎಗರಿಸುವಲ್ಲಿ ಯಶಸ್ವಿಯಾದರು.

ಹೀಗಿತ್ತು ಆ ಕ್ಷಣ..

 

Latest Videos
Follow Us:
Download App:
  • android
  • ios