2ನೇ ಏಕದಿನ: ಶತಕ ಸಿಡಿಸಿ ಜೋ ರೂಟ್ ಬರೆದ ದಾಖಲೆ ಏನು?

England vs india 2nd odi joe root stands tall as hosts finish at 322
Highlights

ಜೋ ರೂಟ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. 2ನೇ ಏಕದಿನಲ್ಲಿ ರೂಟ್ ಅಬ್ಬರದಿಂದ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿದೆ. ಜೋ ರೂಟ್ ಸೆಂಚುರಿ ಸಿಡಿಸೋ ಮೂಲಕ ಬರದೆ ದಾಖಲೆ ಏನು? ಇಲ್ಲಿದೆ.

ಲಂಡನ್(ಜು.14): ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದ ರೂಟ್, ದ್ವಿತೀಯ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 109 ಎಸೆತದಲ್ಲಿ ರೂಟ್ ಸೆಂಚುರಿ ಪೂರೈಸಿದರು. ಇದರೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಮೊದಲ ಏಕದಿನ ಶತಕ ಸಿಡಿಸಿದರು.

 

 

ಏಕದಿನ ಕ್ರಿಕೆಟ್‌ನಲ್ಲಿ 12ನೇ ಸೆಂಚುರಿ ದಾಖಲಿಸಿದ ರೂಟ್, ಟೀಂ ಇಂಡಿಯಾ ಲೆಕ್ಕಾಚಾರ ಬುಡು ಮೇಲು ಮಾಡಿದರು. ಭಾರತೀಯ ಸ್ಪಿನ್ನರ್‌ಗಳನ್ನ ಸಮರ್ಥವಾಗಿ ಎದುರಿಸಿದ ರೂಟ್,  116  ಎಸೆತದಲ್ಲಿ 8 ಬೌಂಡರಿ ಹಾಗೂ 1  ಸಿಕ್ಸರ್ ಮೂಲಕ ಅಜೇಯ 113  ರನ್ ಬಾರಿಸಿದರು. ರೂಟ್ ಅಬ್ಬರದಿಂದ ಇಂಗ್ಲೆಂಡ್ 322 ರನ್ ಕಲೆಹಾಕಿತು.

ಇದನ್ನು ಓದಿ: 2ನೇ ಏಕದಿನ: ಭಾರತದ ಗೆಲುವಿಗೆ 323 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್

loader