Asianet Suvarna News Asianet Suvarna News

2ನೇ ಏಕದಿನ: ಭಾರತದ ಗೆಲುವಿಗೆ 323 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್

ಮೊದಲ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್ , 2ನೇ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದೆ. ಲಾರ್ಡ್ಸ್ ಪಂದ್ಯದಲ್ಲಿ ಅಬ್ಬರಿಸಿದ ಇಂಗ್ಲೆಂಡ್ 322 ರನ್ ಸಿಡಿಸಿದೆ. ಈ ಮೂಲಕ ಭಾರತಕ್ಕೆ ಕಠಿಣ ಸವಾಲು ಒಡ್ಡಿದೆ. ಈ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

India vs england odi england finish at 322 for 7

ಲಂಡನ್(ಜು.14): ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಿಗಧಿತ 50  ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 322 ರನ್ ಸಿಡಿಸಿದೆ. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ ರನ್ 323 ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಜಾನಿ ಬೈರಿಸ್ಟೋ ಹಾಗೂ ಜೇಸನ್ ರಾಯ್ ಅರ್ಧಶತಕದ ಜೊತೆಯಾಟ ನೀಡಿದರು. ಬೈರಿಸ್ಟೋ 38 ರನ್ ಸಿಡಿಸಿದರೆ, ರಾಯ್ 40 ರನ್ ಕಾಣಿಕೆ ನೀಡಿದರು.

86 ರನ್‌ಗೆ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಆಸರೆಯಾದರು. ಇಬ್ಬರು ಅರ್ಧಶತ ಸಿಡಿಸಿ ಮಿಂಚಿದರು. ಆದರೆ ಮಾರ್ಗನ್ 53 ರನ್ ಸಿಡಿಸಿ ಔಟಾದರು. ಇದರೊಂದಿಗೆ ಕುಲದೀಪ್ 3 ವಿಕೆಟ್ ಕಬಳಿಸಿದರು. 

ಜೋ ರೂಟ್ ಹೋರಾಟ ಮುಂದುವರಿಸಿದರೆ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಮೊಯಿನ್ ಆಲಿ ಅಬ್ಬರಿಸಲಿಲ್ಲ. ಅದ್ಬುತ ಪ್ರದರ್ಶನ ನೀಡಿದ ಜೋ ರೂಟ್ ಏಕದಿನ ಕ್ರಿಕೆಟ್‌ನಲ್ಲಿ 12ನೇ ಶತಕ ದಾಖಲಿಸಿದರು.

ರೂಟ್‌ಗೆ ಉತ್ತಮ ಸಾಥ್ ನೀಡಿದ ಡೇವಿಡ್ ವಿಲೆ  50 ರನ್ ಸಿಡಿಸಿದರೆ, ರೂಟ್ ಅಜೇಯ 113 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್  6 ವಿಕೆಟ್ ನಷ್ಟಕ್ಕೆ 322ರನ್ ಸಿಡಿಸಿತು.  ಕುಲದೀಪ್ ಯಾದವ್ 3, ಉಮೇಶ್ ಯಾದವ್ ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚೆಹಾಲ್ ತಲಾ ಒಂದು ವಿಕೆಟ್ ಪಡೆದರು.  
 

Follow Us:
Download App:
  • android
  • ios