Asianet Suvarna News Asianet Suvarna News

ಕಿವೀಸ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್

ಪ್ರಮುಖ ಬ್ಯಾಟ್ಸ್‌ಮನ್'ಗಳಾದ ಅಲೆಕ್ಸ್ ಹೇಲ್ಸ್ 62 ಎಸೆತಗಳಲ್ಲಿ 56,ಸ್ಟೋಕ್ಸ್ 53 ಎಸೆತಗಳಲ್ಲಿ 48, ಬಟ್ಲರ್ 48 ಎಸತೆಗಳಲ್ಲಿ 61 ರನ್ ಗಳಿಸುವುದರೊಂದಿಗೆ ತಂಡದ ಮೊತ್ತ 49.3 ಓವರ್‌ಗಳಲ್ಲಿ 310 ರನ್‌ ಗಳಿಸುವುದರಲ್ಲಿ ಸಹಕಾರಿಯಾದರು. ನ್ಯೂಜಿಲೆಂಡ್ ಪರ ಕೋರಿ ಆ್ಯಂಡರ್‌ಸನ್ ಹಾಗೂ ಆ್ಯಡಂ ಮಿಲ್ನೆ ತಲಾ 3 ವಿಕೆಟ್ ಕಬಳಿಸಿದರೆ, ಟಿಮ್ ಸೌಥಿ 2 ವಿಕೆಟ್ ಪಡೆದರು.

England crush New Zealand enter semi finals

ಕಾರ್ಡೀಫ್(ಜೂ.07): ಕಿವೀಸ್ ತಂಡವನ್ನು 87 ರನ್'ಗಳಿಂದ ಸೋಲಿಸುವುದರೊಂದಿಗೆ ಅತಿಥೇಯ ಇಂಗ್ಲೆಂಡ್ ತಂಡ 2017ನೇ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಇಲ್ಲಿನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್'ಗೆ ಇಳಿಸಿತು.ಆರಂಭದಲ್ಲಿ ನಿಧಾನಗತಿಯ ಆಟವಾಡಿದ ತಂಡದ ಬ್ಯಾಟ್ಸ್'ಮೆನ್'ಗಳು ಅನಂತರದಲ್ಲಿ ಉತ್ತಮ ಮೊತ್ತ ಗಳಿಸುವುದರಲ್ಲಿ ಯಶಸ್ವಿಯಾದರು.

ಪ್ರಮುಖ ಬ್ಯಾಟ್ಸ್‌ಮನ್'ಗಳಾದ ಅಲೆಕ್ಸ್ ಹೇಲ್ಸ್ 62 ಎಸೆತಗಳಲ್ಲಿ 56,ಸ್ಟೋಕ್ಸ್ 53 ಎಸೆತಗಳಲ್ಲಿ 48, ಬಟ್ಲರ್ 48 ಎಸತೆಗಳಲ್ಲಿ 61 ರನ್ ಗಳಿಸುವುದರೊಂದಿಗೆ ತಂಡದ ಮೊತ್ತ 49.3 ಓವರ್‌ಗಳಲ್ಲಿ 310 ರನ್‌ ಗಳಿಸುವುದರಲ್ಲಿ ಸಹಕಾರಿಯಾದರು. ನ್ಯೂಜಿಲೆಂಡ್ ಪರ ಕೋರಿ ಆ್ಯಂಡರ್‌ಸನ್ ಹಾಗೂ ಆ್ಯಡಂ ಮಿಲ್ನೆ ತಲಾ 3 ವಿಕೆಟ್ ಕಬಳಿಸಿದರೆ, ಟಿಮ್ ಸೌಥಿ 2 ವಿಕೆಟ್ ಪಡೆದರು.

England crush New Zealand enter semi finals

ಮತ್ತೆ ಮಿಂಚಿದ ನಾಯಕ ವಿಲಿಯಮ್ಸ್'ನ್

ಗೆಲುವಿಗೆ 311 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವೇಗಿಗಳ ದಾಳಿಗೆ ಸಿಲುಕಿ 44.3 ಓವರ್‌ಗಳಲ್ಲಿ ಆಲ್'ಔಟ್ ಆಯಿತು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದ ನಾಯಕ ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ನಡೆಸಿ 98 ಸತಗಳಲ್ಲಿ 8 ಬೌಂಡರಿಗಳೊಂದಿಗೆ 87 ರನ್ ಗಳಿಸಿದರು. ಆದರೆ ರಾಸ್ ಟೇಲರ್ ಮತ್ತು ಗುಪ್ಟಿಲ್ ಬಿಟ್ಟರೆ ಉಳಿದ ದಾಂಡಿಗರ ವೈಯುಕ್ತಿಕ ಮೊತ್ತ 20 ದಾಟಲಿಲ್ಲ. ಲಿಯಮ್ ಪ್ಲಂಕೆಟ್ (4/55), ಜೇಕ್ ಬಾಲ್2/31 ಹಾಗೂ ರಶೀದ್ 2/47 ಅವರ ಬೌಲಿಂಗ್' ದಾಳಿಗೆ ತಲ್ಲ ವಿಕೇಟ್ ಕಳೆದು'ಕೊಂಡಿತು. ಉತ್ತಮವಾಗಿ ಬೌಲಿಂಗ್ ಮಾಡಿದ ಜೇಕ್ ಬಾಲ್ ಪಂದ್ಯ ಶ್ರೇಷ್ಟರಾದರು.

ಸ್ಕೋರ್

ಇಂಗ್ಲೆಂಡ್ 49.3 ಓವರ್‌ಗಳಲ್ಲಿ 310/10

(ಅಲೆಕ್ಸ್ ಹೇಲ್ಸ್ 56(62),ಜೋ ರೂಟ್ 64(65), ಜೋಸ್ ಬಟ್ಲರ್ 61(48))

ನ್ಯೂಜಿಲೆಂಡ್ 44.3 ಓವರ್‌ಗಳಲ್ಲಿ 223/10

(ಕೇನ್ ವಿಲಿಯಮ್ಸನ್ 87(98))

ಪಂದ್ಯಶ್ರೇಷ್ಠ: ಜೇಕ್ ಬಾಲ್

Follow Us:
Download App:
  • android
  • ios