2015ರ ಅಕ್ಟೋಬರ್ ಬಳಿಕ ಪರಿಚಯಿಸಲಾದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವನಿತೆಯರ ಕ್ರಿಕೆಟ್ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ದುಬೈ(ಅ.03): ಇದೇ ಮೊದಲ ಬಾರಿಗೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಕೇವಲ 0.04 ರೇಟಿಂಗ್ ಅಂಕಗಳಿಂದ ಹಿಂದಿಕ್ಕುವ ಮೂಲಕ ಇಂಗ್ಲೆಂಡ್ ವನಿತೆಯರ ತಂಡ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಹಂಚಿಕೊಂ
2015ರ ಅಕ್ಟೋಬರ್ ಬಳಿಕ ಪರಿಚಯಿಸಲಾದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವನಿತೆಯರ ಕ್ರಿಕೆಟ್ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಮೂರು ಅಂಕಗಳ ಏರಿಕೆ ಕಂಡಿರುವ ಮಿಥಾಲಿ ರಾಜ್ ಸಾರಥ್ಯದ ವನಿತೆಯರ ಟೀಂ ಇಂಡಿಯಾ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
2017ರ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಭಾರತದ ವನಿತೆಯರ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಹೀಗಿದೆ ಐಸಿಸಿ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿ:
ಶ್ರೇಯಾಂಕ ತಂಡ ರೇಟಿಂಗ್ ಅಂಕ
1. ಇಂಗ್ಲೆಂಡ್ 128
2. ಆಸ್ಟ್ರೇಲಿಯಾ 128
3. ನ್ಯೂಜಿಲೆಂಡ್ 118
4. ಭಾರತ 116
5. ವೆಸ್ಟ್'ಇಂಡಿಸ್ 101
6. ದಕ್ಷಿಣ ಆಫ್ರಿಕಾ 93
7. ಪಾಕಿಸ್ತಾನ 72
8. ಶ್ರೀಲಂಕಾ 67
9. ಬಾಂಗ್ಲಾದೇಶ 37
10. ಐರ್ಲೆಂಡ್ 30
