2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್'ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಟ್ರೋಪಿ ಗೆದ್ದಿದ್ದರು. ಈ ಬಾರಿಯು ಟ್ರೋಪಿ ಗೆಲ್ಲುವ ಸನಿಹದಲ್ಲಿದ್ದು, ಜು.20 ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಜುಲೈ 23 ರ ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದಾರೆ   

ಬ್ರಿಸ್ಟಾಲ್(ಜು.18): ದಕ್ಷಿಣ ಆಫ್ರಿಕಾವನ್ನು 2 ವಿಕೇಟ್'ಗಳಿಂದ ಮಣಿಸಿದ ಅತಿಥೇಯ ಇಂಗ್ಲೆಂಡ್ ತಂಡದ ವನಿತೆಯರು 8 ವರ್ಷಗಳ ನಂತರ 2017ರ ಮಹಿಳಾ ವಿಶ್ವಕಪ್'ನ ಫೈನಲ್ ಪ್ರವೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಡಿ ವ್ಯಾನ್ ನಿಕೆರ್ಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ್ತಿ ಎಲ್ ವೋಲ್ವರ್ರ್ಡ್(66: 100 ಎಸತ, 8 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ್ತಿ ಎಂ ಡು ಪ್ರೈಜ್ (76: 95 ಎಸತ, 5 ಬೌಂಡರಿ) ಅವರ ರಕ್ಷಣಾತ್ಮಕ ಆಟದ ನೆರವಿನಿಂದ50 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 218 ಮೊತ್ತ ಕಲೆ ಹಾಕಿದರು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 61 ರನ್ ಆಗುವಷ್ಟರ ವೇಳೆಗೆ 2 ವಿಕೇಟ್ ಕಳೆದುಕೊಂಡಿತು. ವಿಕೇಟ್ ಕೀಪರ್ ಎಸ್.ಟೇಲರ್ (54:76 ಎಸೆತ, 7 ಬೌಂಡರಿ) ನಾಯಕಿ ಹೆಚ್.ಸಿ. ನೈಟ್(30: 56 ಎಸೆತ, 2 ಬೌಂಡರಿ), ವಿಲ್ಸನ್(30: 38 ಎಸೆತ, 3 ಬೌಂಡರಿ),27(27 ಎಸೆತ: 3 ಬೌಂಡರಿ)ಅವರು ಸಮಯೋಚಿತ ಆಟವಾಡಿ 49.4 ಓವರ್'ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು.ವಿಕೇಟ್ ಬೀಳುತ್ತಿದ್ದರು ಇಂಗ್ಲೆಂಡ್'ನ ಮಹಿಳೆಯರು ತಾಳ್ಮೆ ಕಳೆದುಕೊಳ್ಳದೆ ಆಟವಾಡಿದರು.

2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್'ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಟ್ರೋಪಿ ಗೆದ್ದಿದ್ದರು. ಈ ಬಾರಿಯು ಟ್ರೋಪಿ ಗೆಲ್ಲುವ ಸನಿಹದಲ್ಲಿದ್ದು, ಜು.20 ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಜುಲೈ 23 ರ ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದಾರೆ

ಸ್ಕೋರ್

ದಕ್ಷಿಣ ಆಫ್ರಿಕಾ: 218/6 (50 ov)

ಇಂಗ್ಲೆಂಡ್:221/8(49.4)

ಇಂಗ್ಲೆಂಡ್'ಗೆ 2 ವಿಕೇಟ್'ಗಳ ಜಯ

ಪಂದ್ಯ ಶ್ರೇಷ್ಠೆ: ಎಸ್.ಜೆ. ಟೇಲರ್