ಲಂಡನ್(ಆ.13): ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಇದೀಗ 3ನೇ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಿಸಿದೆ. ಲಾರ್ಡ್ಸ್ ಪಂದ್ಯದ ಗೆಲುವಿನ ಬೆನ್ನಲ್ಲೇ ತಂಡ ಪ್ರಕಟಿಸಿರುವ ಇಂಗ್ಲೆಂಡ್ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.

ಟ್ರೆಂಟ್‌ಬ್ರಿಡ್ಜ್ ಪಂದ್ಯಕ್ಕೆ ಆಯ್ಕೆ ಮಾಡಿರೋ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 13 ಮಂದಿ ಸದಸ್ಯರ ತಂಡ ಆಯ್ಕೆ ಮಾಡಿರುವ ಇಂಗ್ಲೆಂಡ್ ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಂಡಿದೆ.  ನಿರೀಕ್ಷೆಯಂತೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ.

 

 

3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಜೋಸ್ ಬಟ್ಲರ್, ಮೊಯಿನ್ ಆಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಆಲಿಸ್ಟೈರ್ ಕುಕ್, ಸ್ಯಾಮ್ ಕುರ್ರನ್, ಕೆಟನ್ ಜೆನ್ನಿಂಗ್ಸ್, ಒಲ್ಲಿ ಪೋಪ್, ಜ್ಯಾಮಿ ಪೋರ್ಟರ್, ಆದಿಲ್ ರಶೀದ್, ಕ್ರಿಸ್ ವೋಕ್ಸ್.

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್ ಗೆಲುವು ಸಾಧಿಸಿದ್ದ ಇಂಗ್ಲೆಂಡ್, 2ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಗೆಲುವು ದಾಖಲಿಸಿತ್ತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ 3ನೇ ಪಂದ್ಯ ಗೆದ್ದು ಸರಣಿ ಗೆಲುವು ಸಾಧಿಸಲು ಇಂಗ್ಲೆಂಡ್ ತಯಾರಾಗಿದೆ.