ಬೆಂಗಳೂರು(ಏ.14): ಟೀಂ ಇಂಡಿಯಾ ಎ ತಂಡದ ಕೋಚ್, ಮಾಜಿ ನಾಯಕ ರಾಹುಲ್ ದ್ರಾವಿಡ್  ಚುನಾವಣಾ ರಾಯಭಾರಿಯಾಗಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ದ್ರಾವಿಡ್ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ 2019ರ ಚುನಾವಣೆಯಲ್ಲಿ ಸ್ವತಃ ರಾಹುಲ್ ದ್ರಾವಿಡ್ ಮತದಾನ ಮಾಡೋ ಹಕ್ಕು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

ಬೆಂಗಳೂರಿನಲ್ಲಿ ನೆಲೆಸಿರುವ ರಾಹುಲ್ ದ್ರಾವಿಡ್ ತಮ್ಮ ನಿವಾಸವನ್ನು ಇಂದಿರಾನಗರದಿಂದ ಮತ್ತಿಕೆರೆಗೆ ಸ್ಥಳಾಂತರಿಸಿದ್ದಾರೆ. ರಾಹುಲ್ ದ್ರಾವಿಡ್ ವಿಳಾಸ ಬದಲಾಗಿದೆ. ಆದರೆ ಮತದಾರ ಪಟ್ಟಿಯಲ್ಲಿ ದ್ರಾವಿಡ್ ಹಾಗು ಕುಟುಂಬದ ಹೆಸರು ದಾಖಲಾಗಿಲ್ಲ. ನಿಗದಿತ ಸಮಯಕ್ಕೆ ಫಾರ್ಮ್ 6 ಭರ್ತಿ ಮಾಡದ ಕಾರಣ ಸಮಸ್ಯೆ ಉದ್ಭವಿಸಿದೆ.

ಇದನ್ನೂ ಓದಿ: ದ್ರಾವಿಡ್ ಹೆಸರಲ್ಲಿ ಹಾಡು: ವಿಡಿಯೋ ಭಾರೀ ವೈರಲ್..!

ಕಳೆದ ತಿಂಗಳ ಆರಂಭದಲ್ಲೇ ರಾಹುಲ್ ದ್ರಾವಿಡ್ ಫಾರ್ಮ್​ 6 ನೀಡಬೇಕಿತ್ತು. ಆದರೆ ದ್ರಾವಿಡ್ ಭರ್ತಿ ಮಾಡಿ ಸರಿಯಾದ ಸಮಯಕ್ಕೆ ನೀಡಿಲ್ಲ. ಸದ್ಯ ಯಾವುದೇ ಸಾಧ್ಯತೆ ಇಲ್ಲ. ಚುನಾವಣೆ ಮುಗಿದ ಬಳಿಕವೇ ಮತದಾರರ ಪಟ್ಟಿಯಲ್ಲಿ ದ್ರಾವಿಡ್ ಹೆಸರು ದಾಖಲಿಸಲು ಸಾಧ್ಯ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.