ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 6 ನಾಯಕರನ್ನು ಕಂಡಿದೆ. ಮೊದಲ ಆವೃತ್ತಿಯಲ್ಲಿ ದಿಗ್ಗಜ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದರೆ, ಸದ್ಯ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. RCB ತಂಡದ ನಾಯಕ ವಿವರ ಇಲ್ಲಿದೆ.
ಬೆಂಗಳೂರು(ಮಾ.22): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡಕ್ಕೆ ಅಪಾರ ಅಭಿಮಾನಿ ಬಳಗವಿದೆ. ಪ್ರತಿ ಆವೃತ್ತಿಯಲ್ಲೂ RCB ಬಲಿಷ್ಠ ಹಾಗೂ ಸ್ಟಾರ್ ಆಟಗಾರರನ್ನ ಕಣಕ್ಕಿಳಿಸಿದೆ. ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಕೊರಗು ಹೊರತು ಪಡಿಸಿದರೆ RCB ಪ್ರತಿ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡೋ ಮೂಲಕ ಅಭಿಮಾನಿಗಳನ್ನು ರಂಜಿಸಿದೆ.
ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!
2008ರಿಂದ ಇದೀಗ ಮಾರ್ಚ್ 23 ರಿಂದ ಆರಂಭಗೊಳ್ಳುತ್ತಿರುವ 12ನೇ ಆವೃತ್ತಿ ವರೆಗೂ RCB ತಂಡ ಇತರ ತಂಡಗಳಿಗಿಂತ ಭಿನ್ನವಾಗಿದೆ. RCBಯ ಸ್ಟಾರ್ ಹಾಗೂ ದಿಗ್ಗಜ ಆಟಗಾರರೇ ಇದಕ್ಕೆ ಕಾರಣ. ಚೊಚ್ಚಲ ಆವೃತ್ತಿಯಲ್ಲಿ RCB ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಿದ್ದರು. ಇಲ್ಲಿದೆ RCB ತಂಡದ ನಾಯಕರ ವಿವರ
ಇದನ್ನೂ ಓದಿ: IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!
RCB ನಾಯಕರು:
ರಾಹುಲ್ ದ್ರಾವಿಡ್(2008)
ಕೆವಿನ್ ಪೀಟರ್‌ಸನ್(2009)
ಅನಿಲ್ ಕುಂಬ್ಳೆ(2009-10)
ಡೆನಿಯಲ್ ವೆಟೋರಿ(2011-12)
ವಿರಾಟ್ ಕೊಹ್ಲಿ(2013-ಪ್ರಸಕ್ತ)
ಸದ್ಯ ವಿರಾಟ್ ಕೊಹ್ಲಿ RCB ತಂಡವನ್ನು ಮುನ್ನಡೆಸುತ್ತಿದ್ದಾರೆ. 2017ರ ಆವೃತ್ತಿ 3 ಪಂದ್ಯಗಳಲ್ಲಿ ಶೇನ್ ವ್ಯಾಟ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ RCB ಒಟ್ಟು 6 ನಾಯಕರನ್ನು ಕಂಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 22, 2019, 8:18 PM IST