ಡ್ರೈವಿಂಗ್ ಟಿಪ್ಸ್: ಅಪಘಾತಕ್ಕೆ ಕಾರಣವಾಗಬಹುದು ಈ 5 ವಸ್ತು!
ಕಾರು ಡ್ರೈವಿಂಗ್ ವೇಳೆ ಪ್ರಮುಖ 5 ವಸ್ತುಗಳ ಕುರಿತು ಎಚ್ಚರ ವಹಿಸಿಬೇಕು. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಡ್ರೈವಿಂಗ್ ವೇಳೆ ಎಚ್ಚರ ವಹಿಸಬೇಕಾದ 5 ವಸ್ತುಗಳು ಯಾವುದು? ಇಲ್ಲಿದೆ ವಿವರ.
ಬೆಂಗಳೂರು(ಫೆ.08): ಕಾರು ಅಥವಾ ವಾಹನ ಡ್ರೈವಿಂಗ್ ಮಾಡೋ ವೇಳೆ ಎಚ್ಚರಿಕೆ ವಹಿಸೋದು ತುಂಬಾ ಅಗತ್ಯ. ಇದರ ಜೊತೆಗೆ ಕಾರಿನಲ್ಲಿ ಕೆಲ ವಸ್ತುಗಳು ಅಪಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಡ್ರೈವಿಂಗ್ ಮಾಡೋ ಮುನ್ನ ಎಚ್ಚರವಹಿಸೋದು ಅಗತ್ಯ.
ನೀರು ಅಥವಾ ಜ್ಯೂಸ್ ಬಾಟಲಿ
ಕಾರು ಪ್ರಯಾಣದ ವೇಳೆ ನೀರು ಅತ್ಯಗತ್ಯ. ಹೀಗಾಗಿ ನೀರಿನ ಬಾಟಲಿ, ಜ್ಯೂಸ್ ಬಾಟಲಿಗಳನ್ನ ಒಯ್ಯುವುದು ಅನಿವಾರ್ಯ. ಆದರೆ ಈ ಬಾಟಲಿಗಳನ್ನ ಸರಿಯಾದ ಸ್ಥಳದಲ್ಲಿ ಇರಿಸಿದರೆ ಸಮಸ್ಯೆ ಇಲ್ಲ. ಆದರೆ ಫ್ಲೋರ್ ಮೇಲೆ ಉರುಳಾಡುತ್ತಿದ್ದರೆ ಅಪಾಯ. ಹೀಗೆ ಉರುಳಾಡುತ್ತಿರುವ ಬಾಟಲಿಗಳು ಬ್ರೇಕ್ ಕೆಳಭಾಗದಲ್ಲಿ ಸಿಲುಕಿಕೊಂಡರೆ ಕಾರು ನಿಯಂತ್ರಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: ಗೇರ್ ಲಿವರ್ ಬದಲು ಬಿದಿರಿನ ಕೋಲು ಬಳಕೆ- ಸ್ಕೂಲ್ ಬಸ್ ಚಾಲಕ ಬಂಧನ!
ಕಳಪೆ ಮ್ಯಾಟ್ ಬಳಕೆ
ಕಳಪೆ ಕಾರು ಮ್ಯಾಟ್‌ನಿಂದ ಅಪಾಯ ಹೆಚ್ಚಾಗುತ್ತೆ. ಡ್ರೈವರ್ ಕೆಳಭಾಗದಲ್ಲಿನ ಮ್ಯಾಟ್ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು. ಮ್ಯಾಟ್‌ಗೆ ಸರಿಯಾದ ಕ್ಲಿಪ್ ಹಾಕಿರಬೇಕು. ಇದು ಕೂಡ ಬ್ರೇಕ್, ಕ್ಲಚ್ ಅಥವಾ ಎಕ್ಸಲರೇಟರ್‌ಗೆ ಸಿಲುಕಿ ಅಪಾಯಕ್ಕೆ ಎಡೆಮಾಡಿಕೊಡುತ್ತೆ.
ಕಳಪೆ ಗುಣಮಟ್ಟದ ಸ್ಟೀರಿಂಗ್ ಕವರ್
ಕಳಪೆ ಗುಣಮಟ್ಟದ ಸ್ಟೀರಿಂಗ್ ಕವರ್ ಹಾಕುವುದರಿಂದ ತುರ್ತು ಸಂದರ್ಭದಲ್ಲಿ ಸ್ಲಿಪ್ ಆಗೋ ಸಾಧ್ಯತೆಗಳಿವೆ. ಈ ವೇಳೆ ಕಾರು ನಿಯಿಂತ್ರಣಕ್ಕೆ ಸಿಗದೆ ಅಪಘಾತವಾಗೋ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!
ಸೂಕ್ತ ಚಪ್ಪಲ್ ಬಳಸಿ
ಕಾರು ಡ್ರೈವಿಂಗ್ ವೇಳೆ ಸೂಕ್ತ ಚಪ್ಪಲ್ ಅಥವ ಶೂ ಧರಿಸಿದರೆ ಉತ್ತಮ. ಸ್ಯಾಂಡಲ್, ಸ್ಲಿಪ್ಪರ್‌ಗಳು ಕೂಡ ಕಾರು ಅಪಘಾತಕ್ಕೆ ಕಾರಣವಾಗಲಿದೆ. ಹೀಗಾಗಿ ಈ ಕುರಿತೂ ಎಚ್ಚರ ವಹಿಸಬೇಕು.
ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳಿ
ಡ್ರೈವ್ ಮಾಡೋ ವೇಳೆ ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳುವುದು ಅಷ್ಟೇ ಮುಖ್ಯ. ಆಸನ ವ್ಯವಸ್ಥೆ ಏರುಪೇರಾದರೂ ಅಪಾಯ ಕಟ್ಟಿಟ್ಟ ಬುತ್ತಿ. ತುರ್ತು ಸಂದರ್ಭದಲ್ಲಿ ಸರಿಯಾದ ಕ್ರಮದಲ್ಲಿ ಇಲ್ಲದಿದ್ದಲಿ ಕಾರು ನಿಯಂತ್ರಿಸುವುದು ಕಷ್ಟ.