ಗೇರ್ ಲಿವರ್ ಬದಲು ಬಿದಿರಿನ ಕೋಲು ಬಳಕೆ- ಸ್ಕೂಲ್ ಬಸ್ ಚಾಲಕ ಬಂಧನ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Feb 2019, 4:44 PM IST
School bus driver arrested for using bamboo stick instead of gear lever
Highlights

ರಸ್ತೆ ಸುರಕ್ಷತೆ ಪಾಲನೆಯಲ್ಲಿ ಭಾರತೀಯರು ಒಂದು ಹೆಜ್ಜೆ ಹಿಂದೆ. ಇದಕ್ಕೆ ಮುಂಬೈನಲ್ಲಿ ನಡೆದ ಮತ್ತೊಂದು ಘಟನೆ ಸಾಕ್ಷಿ. ಸ್ಕೂಲ್ ಬಸ್ ಚಾಲಕ ಮಾಡಿದ ಯಡವಟ್ಟಿನಿಂದ ಬಂಧನಕ್ಕೊಳಗಾಗಿದ್ದಾನೆ. ಇಲ್ಲಿದೆ ಬಸ್ ಚಾಲಕ ಹಾಗೂ ಮಾಲೀಕರ ಎಡವಟ್ಟು ಮಾಹಿತಿ. 

ಮುಂಬೈ(ಫೆ.07):  ಡ್ರೈವಿಂಗ್, ರಸ್ತೆ ನಿಯಮ ಪಾಲನೆ, ಸುರಕ್ಷತಾ ವಿಧಾನಗಳನ್ನ ಪಾಲಿಸುವುದರಲ್ಲಿ ಭಾರತೀಯರು ಸ್ವಲ್ಪ ಹಿಂದೆ. ಏನಿದ್ದರೂ ಚಲ್ತಾ ಹೇ ಪಾಲಿಸಿ ನಮ್ಮದು. ಇದೀಗ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿದ ಮುಂಬೈನ ಸ್ಕೂಲ್ ಬಸ್ ಡ್ರೈವರ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!

ಸಾಂತ ಕ್ರೂಝ್ ಬಳಿಯ ಪೊದಾರ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಪ್ರತಿ ದಿನ ಶಾಲಾ ಮಕ್ಕಳಿಗೆ ಬಸ್ ಸೇವೆ ನೀಡುತ್ತಿದೆ. ಆದರೆ ಈ ಬಸ್‌ನಲ್ಲಿ ಪ್ರಯಾಣಿಸೋ ಮಕ್ಕಳ ಸುರಕ್ಷತೆ ಕುರಿತು ಯಾವುದೇ ಯೋಚನೆ ಮಾಡಿಲ್ಲ. ಇದಕ್ಕೆ ಕಾರಣವಾಗಿದ್ದೇ ಬಸ್. ಶಾಲಾ ಬಸ್‌ನ ಗೇರ್ ಲಿವರ್ ಕಿತ್ತು ಹೋದರೂ ಅದನ್ನ ಸರಿ ಪಡಿಸದೇ ಬಿದಿರಿನ ಕೋಲು ಬಳಸಿ ಶಾಲಾ ಮಕ್ಕಳನ್ನ ಕರೆದೊಯ್ಯಲಾಗುತ್ತಿತ್ತು.

ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!

ಬಸ್ ಚಾಲಾಕ ಒಂದು ವಾರದಿಂದ ಇದೇ ರೀತಿ ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ. ಆದರೆ ಗೇರ್ ಸರಿಯಾಗಿ ಬೀಳದ ಕಾರಣ BMW ಕಾರಿಗೆ ಗುದ್ದಿ ಅಪಘಾತ ಸಂಭವಿಸಿತ್ತು. ಈ ವೇಳೆ ಅಪಘಾತಕ್ಕೆ ಗೇರ್ ಲಿವರ್ ಇಲ್ಲದಿರುವುದೇ ಕಾರಣ ಅನ್ನೋದು ಬಯಾಲಾಗಿದೆ. ಅಪಘಾತವಾದರೂ ಬಸ್ ಚಾಲಕ ನಿಲ್ಲಿಸೋ ಗೋಜಿಗೆ ಹೋಗಿಲ್ಲ.

ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

BMW ಕಾರು ಮಾಲೀಕ ಬಸ್ ಚೇಸ್ ಮಾಡಿ ಅಡ್ಡಗಟ್ಟಿದ್ದಾನೆ. ಈ ವೇಳೆ ಗೇರ್ ಲಿವರ್ ಬದಲೂ ಬಿದಿರಿನ ಕೋಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ.  ದೂರಿನಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ಚಾಲಕನನ್ನ ಬಂಧಿಸಿದ್ದಾರೆ. ಅದೃಷ್ಟವಶಾತ್ ಅಪಘಾತದ ವೇಳೆ ಶಾಲಾ ಮಕ್ಕಳು ಬಸ್‌ನಲ್ಲಿರಲಿಲ್ಲ. 

loader