ಮುಂಬೈ(ಮೇ.16): ದ್ವಿಪಕ್ಷೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಗಮನಸೆಳೆದಿರುವ ರಿಷಬ್ ಪಂತ್ ಬದಲು ಅನುಭವಿ ದಿನೇಶ್ ಕಾರ್ತಿಕ್‌ಗೆ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ನೀಡಲಾಗಿದೆ. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಪಂತ್ ಬದಲು ಕಾರ್ತಿಕ್‌ಗೆ ಸ್ಥಾನ ನೀಡಿರುವುದು ಯಾಕೆ ಅನ್ನೋದನ್ನು ನಾಯಕ ವಿರಾಟ್ ಕೊಹ್ಲಿ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿದು ಗುಡ್ ನ್ಯೂಸ್..!

ದಿನೇಶ್ ಕಾರ್ತಿಕ್ ಅನುಭವಿ ಆಟಗಾರ. ಒತ್ತಡದ ಸಂದರ್ಭದಲ್ಲಿ ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇಷ್ಟೇ ಅಲ್ಲ ಹಲವು ಭಾರಿ ದಿನೇಶ್ ಕಾರ್ತಿಕ್ ಒತ್ತಡದ ಸಂದರ್ಭ ಎದುರಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಾರ್ತಿಕ್ 15 ಆಟಗಾರರ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ 2019: 80,000 ಭಾರತೀಯರು ಇಂಗ್ಲೆಂಡ್‌ಗೆ!

ಎಂ.ಎಸ್.ಧೋನಿಗೆ ಮೀಸಲು ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಕಾರ್ತಿಕ್ 2004ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. 91 ಏಕದಿನ ಪಂದ್ಯ ಆಡಿದ  ಅನುಭವ ದಿನೇಶ್ ಕಾರ್ತಿಕ್‌ಗೆ ಇದೆ. ಆದರೆ 21 ವರ್ಷದ ರಿಷಬ್ ಪಂತ್ 5 ಏಕದಿನ ಪಂದ್ಯ ಆಡಿದ್ದಾರೆ. ಉತ್ತಮ ಪ್ರದರ್ಶನ ನೀಡಿರುವ ರಿಷಬ್ ಪಂತ್‌ಗೆ ಅನುಭವದ ಕೊರತೆ ಇದೆ.  ಹೀಗಾಗಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.