ನವದೆಹಲಿ(ಮೇ.10): ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾದ ಬಳಿಕ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು ದೂರದರ್ಶನ್ ಸ್ಪೋರ್ಟ್ಸ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ಹೌದು, ಐಪಿಎಲ್‌ ಮುಗಿಯುತ್ತಿದ್ದಂತೆ ಮೇ.30ರಿಂದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಟೂರ್ನಿಯಲ್ಲಿ ಭಾರತ ಆಡುವ ಪಂದ್ಯಗಳು ಡಿಡಿ ಸ್ಪೋರ್ಟ್ಸ್’ನಲ್ಲೂ ಪ್ರಸಾರವಾಗಲಿವೆ. ಡಿಡಿ ಸ್ಪೋರ್ಟ್ಸ್ ವಾಹಿನಿ ಗುರುವಾರ ತನ್ನ ಅಧಿಕೃತ ಟ್ವೀಟರ್‌ ಖಾತೆ ಮೂಲಕ ಈ ವಿಷಯ ಬಹಿರಂಗಪಡಿಸಿತು. ಇದರಿಂದಾಗಿ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋಟ್ಸ್‌ರ್‍ ವಾಹಿನಿಗೆ ಕೋಟ್ಯಂತರ ರುಪಾಯಿ ನಷ್ಟವಾಗುವ ಸಾಧ್ಯತೆ ಇದೆ. 

ಸ್ಟಾರ್‌ ಸ್ಪೋರ್ಟ್ಸ್ ವೀಕ್ಷಿಸಲು ಹಣ ಪಾವತಿಸಬೇಕಿದೆ. ಆದರೆ ಡಿಡಿ ಸ್ಪೋರ್ಟ್ಸ್‌ ಉಚಿತವಾಗಿ ದೊರೆಯುವ ಕಾರಣ, ಸಾವಿರಾರು ಅಭಿಮಾನಿಗಳು ಡಿಡಿಯಲ್ಲೇ ಪಂದ್ಯ ವೀಕ್ಷಿಸಲು ಮುಂದಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಂದು ಆರಂಭವಾಗಲಿದ್ದು, ಭಾರತ ತಂಡವು ಜೂನ್ 06ರಿಂದ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಇಲ್ಲಿದೆ ನೋಡಿ..