ವಿಶ್ವಕಪ್ 2019: 80,000 ಭಾರತೀಯರು ಇಂಗ್ಲೆಂಡ್‌ಗೆ!

2019ರ ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ನಡೆಯಲಿದೆ. ಈ ಭಾರಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಮುಂಚೂಣಿಯಲ್ಲಿದೆ. ಹೀಗಾಗಿ ಈ ಬಾರಿಯ ಟೂರ್ನಿಗೆ ಬರೋಬ್ಬರಿ 80,000 ಭಾರತೀಯರು ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

World cup 2019 80k Indians will travel England to support team india

ನವದೆಹಲಿ(ಮೇ.09): ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಭಾರತ ತಂಡಕ್ಕೆ ಬೆಂಬಲ ನೀಡಲು 80000 ಭಾರತೀಯರು ಇಂಗ್ಲೆಂಡ್‌ಗೆ ತೆರಳುವ ನಿರೀಕ್ಷೆ ಇದೆ. ಒಂದೂವರೆ ತಿಂಗಳ ಕಾಲ ನಡೆಯಲಿರುವ ವಿಶ್ವಕಪ್‌ ಟೂರ್ನಿ ವೇಳೆ ಭಾರತ ತಂಡ ರೌಂಡ್‌ ರಾಬಿನ್‌ ಹಂತದಲ್ಲಿ 9 ಪಂದ್ಯಗಳನ್ನು ಆಡಲಿದ್ದು, ಸೆಮಿಫೈನಲ್‌ ಪ್ರವೇಶಿಸಲಿರುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ಹೀಗಾಗಿ ವಿಶ್ವಕಪ್‌ ವೀಕ್ಷಣೆಗೆ ಆಗಮಿಸಲಿರುವ ವಿದೇಶಿ ಅಭಿಮಾನಿಗಳ ಪೈಕಿ ಭಾರತೀಯರೇ ಹೆಚ್ಚಿರಲಿದ್ದಾರೆ ಎಂದು ಇಲ್ಲಿರುವ ಬ್ರಿಟಿಷ್‌ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ವಿಶ್ವಕಪ್ 2019: ಕ್ರಿಕೆಟಿಗರ ಜೊತೆ ಪತ್ನಿಯರ ಪ್ರವಾಸ- ಬಿಸಿಸಿಐನಿಂದ ಮಹತ್ವ ನಿರ್ಧಾರ!

ಭಾರತ-ಪಾಕಿಸ್ತಾನ ನಡುವೆ ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಪಂದ್ಯ ಹಾಗೂ ಜು.14ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಬೇಡಿಕೆ ಹೆಚ್ಚಿದೆ. ಭಾರತ-ಆಸ್ಪ್ರೇಲಿಯಾ, ಭಾರತ-ಇಂಗ್ಲೆಂಡ್‌ ನಡುವಿನ ಪಂದ್ಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಸೇರುವ ನಿರೀಕ್ಷೆ ಇದೆ.

ಪ್ರತಿ ದಿನ 3500 ವೀಸಾ: ಬ್ರಿಟಿಷ್‌ ರಾಯಭಾರಿ ಕಚೇರಿ ಇತ್ತೀಚಿಗೆ ಪ್ರತಿ ದಿನ ಸುಮಾರು 3500 ವೀಸಾ ಅರ್ಜಿಗಳನ್ನು ಸ್ವೀಕರಿಸುತ್ತದೆ. ಈ ವರ್ಷ ಜನವರಿಯಿಂದ ಏಪ್ರಿಲ್‌ ವರೆಗೂ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸಂಸ್ಕರಿಸಲಾಗಿದೆ. ಸಾಮಾನ್ಯವಾಗಿ ಬ್ರಿಟನ್‌ ವೀಸಾ ಪಡೆಯಲು 15 ದಿನಗಳು ಆಗಲಿದ್ದು, ವಿಶ್ವಕಪ್‌ ವೀಕ್ಷಣೆಗೆ ತೆರಳುವ ಭಾರತೀಯರು ಕೊನೆ ಕ್ಷಣದಲ್ಲಿ ವೀಸಾ ಅರ್ಜಿ ಸಲ್ಲಿಸಿದರೆ ಕೇವಲ 5 ದಿನಗಳಲ್ಲಿ ವೀಸಾ ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಬ್ರಿಟಿಷ್‌ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇದಾರ್ ಇಂಜುರಿ-ವಿಶ್ವಕಪ್‌ಗೆ ಹಿರಿಯ ಆಲ್ರೌಂಡರ್‌ ಆಯ್ಕೆಗಾಗಿ ಟ್ವಿಟರಿಗರ ಆಗ್ರಹ!

ಕಡಿಮೆಯಾಗದ ಉತ್ಸಾಹ: ಪ್ರತಿ ದಿನ ಭಾರತದಿಂದ ಬ್ರಿಟನ್‌ಗೆ 5 ಜೆಟ್‌ ಏರ್‌ವೇಸ್‌ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದೀಗ ಜೆಟ್‌ ಏರ್‌ವೇಸ್‌ ಕಾರ್ಯ ಸ್ಥಗಿತಗೊಳಿಸಿರುವ ಕಾರಣ, ವಿಮಾನ ದರದಲ್ಲಿ ಹೆಚ್ಚಳವಾಗಿದೆ. ಆದರೂ ಭಾರತೀಯ ಅಭಿಮಾನಿಗಳಲ್ಲಿ ಉತ್ಸಾಹ ಕಡಿಮೆಯಾಗಿಲ್ಲ ಎಂದು ಪ್ರವಾಸ ಏಜೆನ್ಸಿಯೊಂದು ಮಾಹಿತಿ ನೀಡಿದೆ.

Latest Videos
Follow Us:
Download App:
  • android
  • ios