ಇಲ್ಲಿ ನಡೆಯಲಿರುವ ‘ಮ್ಯಾಚ್ ಫಾರ್ ಯುನಿಟಿ’ ಪಂದ್ಯದಲ್ಲಿ ಇಬ್ಬರು ಕಣಕ್ಕಿಳಿಯಲಿದ್ದಾರೆ ಎಂದು ಆಯೋಜಕರು ಖಚಿತಪಡಿಸಿದ್ದಾರೆ.
ಕೋಲ್ಕತಾ(ಅ.05): ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಹಾಗೂ ಭಾರತ ಕ್ರಿಕೆಟ್'ನ ಮಾಜಿ ನಾಯಕ ಸೌರವ್ ಗಂಗೂಲಿ ಅಕ್ಟೋಬರ್ 9ರಂದು ಫುಟ್ಬಾಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಇಲ್ಲಿ ನಡೆಯಲಿರುವ ‘ಮ್ಯಾಚ್ ಫಾರ್ ಯುನಿಟಿ’ ಪಂದ್ಯದಲ್ಲಿ ಇಬ್ಬರು ಕಣಕ್ಕಿಳಿಯಲಿದ್ದಾರೆ ಎಂದು ಆಯೋಜಕರು ಖಚಿತಪಡಿಸಿದ್ದಾರೆ. ಈ ಮೊದಲು ಮರಡೋನಾ ಸೆಪ್ಟೆಂಬರ್ 3ನೇ ವಾರದಲ್ಲಿ ಆಗಮಿಸಬೇಕಿತ್ತು. ಬಳಿಕ ಪ್ರವಾಸವನ್ನು ಅ.2ಕ್ಕೆ ಮುಂದೂಡಲಾಗಿತ್ತು.
ಅಂತಿಮವಾಗಿ ಅ.8 ರಂದು ಮರಡೋನಾ ಕೋಲ್ಕತಾಕ್ಕೆ ಆಗಮಿಸಲಿದ್ದು, ಅ.9ರಂದು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ
