‘ಧೋನಿ ಈಗಲೂ ವಿಶ್ವದ ನಂ.1 ಕೀಪರ್ ಎನ್ನುವುದರಲ್ಲಿ ಅನುಮಾನವಿಲ್ಲ. ಲಂಕಾ ವಿರುದ್ಧ ಅವರ ಕೆಲ ಸ್ಟಂಪಿಂಗ್‌'ಗಳೇ ಇದಕ್ಕೆ ಸಾಕ್ಷಿ. ಸದ್ಯಕ್ಕೆ ದಿನೇಶ್ ಕಾರ್ತಿಕ್ ಮೀಸಲು ಕೀಪರ್ ಆಗಿರಲಿದ್ದಾರೆ’ ಎಂದು ಪ್ರಸಾದ್ ಹೇಳಿದ್ದಾರೆ.

ಮುಂಬೈ(ಡಿ.24): 2019ರ ಏಕದಿನ ವಿಶ್ವಕಪ್'ವರೆಗೂ ಎಂ.ಎಸ್.ಧೋನಿ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧೋನಿ ಸ್ಥಾನ ತುಂಬಬಲ್ಲ ವಿಕೆಟ್ ಕೀಪರ್‌'ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದ್ದು, ಯಾರೂ ಮಾಜಿ ನಾಯಕನಷ್ಟು ಸಮರ್ಥರಲ್ಲ ಎಂದು ಪ್ರಸಾದ್ ಹೇಳಿದ್ದಾರೆ. ‘ಭಾರತ ‘ಎ’ ಸರಣಿಗಳಲ್ಲಿ ಕೆಲ ಯುವ ವಿಕೆಟ್ ಕೀಪರ್'ಗಳನ್ನು ಬೆಳೆಸುವ ಯತ್ನ ನಡೆಯುತ್ತಿದೆ. ಆದರೆ ಧೋನಿಯೇ ವಿಶ್ವಕಪ್'ವರೆಗೂ ತಂಡದಲ್ಲಿ ಇರಲಿದ್ದಾರೆ’ ಎಂದು ಪ್ರಸಾದ್ ಖಚಿತಪಡಿಸಿದ್ದಾರೆ.

‘ಧೋನಿ ಈಗಲೂ ವಿಶ್ವದ ನಂ.1 ಕೀಪರ್ ಎನ್ನುವುದರಲ್ಲಿ ಅನುಮಾನವಿಲ್ಲ. ಲಂಕಾ ವಿರುದ್ಧ ಅವರ ಕೆಲ ಸ್ಟಂಪಿಂಗ್‌'ಗಳೇ ಇದಕ್ಕೆ ಸಾಕ್ಷಿ. ಸದ್ಯಕ್ಕೆ ದಿನೇಶ್ ಕಾರ್ತಿಕ್ ಮೀಸಲು ಕೀಪರ್ ಆಗಿರಲಿದ್ದಾರೆ’ ಎಂದು ಪ್ರಸಾದ್ ಹೇಳಿದ್ದಾರೆ.