ಕಾನ್ಪುರ(ಸೆ.23): 2015ರ ವಿಶ್ವಕಪ್ ತಂಡದ ಆಯ್ಕೆ ವೇಳೆಯಲ್ಲಿ ನಾಯಕ ಎಂ.ಎಸ್.ಧೋನಿ ರಾಜಕೀಯ ಮಾಡಿದ್ದಾರೆ, ಉದ್ದೇಶ ಪೂರ್ವಕವಾಗಿ ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
ಈ ವಿಚಾರವಾಗಿ ಮಾತನಾಡಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್, ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಡಲು ಧೋನಿ ಕಾರಣ ಅಲ್ಲ ಎಂದಿದ್ದಾರೆ.
ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕ ಧೋನಿ ಆಯ್ಕೆಗಾರರ ವಿಚಾರದಲ್ಲಿ ಎಂದೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
ಗೌತಮ್ ಗಂಭೀರ್ ಹಾಗೂ ಯುವರಾಜ್ ಸಿಂಗ್ 2015ರ ವಿಶ್ವಕಪ್ ನಿಂದ ಹೊರಬೀಳಲು ಧೋನಿ ಕಾರಣ ಎಂಬ ಮಾತುಗಳಿವೆ ಅವು ಸುಳ್ಳು ಎಂದು ಪಾಟೀಲ್ ತಿಳಿಸಿದ್ದಾರೆ.
ಅಸಲಿಗೆ ಧೋನಿಯನ್ನೇ ನಾಯಕತ್ವದಿಂದ ಕೆಳಗಿಳಿಸಿ ಬೇರೆಯವರಿಗೆ ಆ ಸ್ಥಾನ ನೀಡಲು ಯೋಚಿಸಿದ್ದೆವು. ಆದರೆ, ಇದು ಸರಿಯಾದ ಸಮಯ ಅಲ್ಲ ಎಂದು ಸುಮ್ಮನಿದ್ದೆವು ಅಂತಾನೂ ಸಂದೀಪ್ ಪಾಟೀಲ್ ಹೇಳಿದ್ದಾರೆ.
