ಫೈನಲ್ ಟಿ20ಯಲ್ಲಿ ಉತ್ತಮ ಮೊತ್ತ ಪೇರಿಸಿದ ಭಾರತ: ಧವನ್,ರೈನಾ ಉತ್ತಮ ಆಟ

Dhavan and Raina Help IND cross 150
Highlights

ಶಿಖರ್ ಧವನ್ ಹಾಗೂ ಸುರೇಶ್ ರೈನಾ ಅವರು 2ನೇ ವಿಕೇಟ್ ಜೊತೆಯಾಟಕ್ಕೆ 65 ರನ್'ಗಳ ಪೇರಿಸಿದರು

ಕೇಪ್'ಟೌನ್(ಫೆ.24): ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 173 ರನ್'ಗಳ ಟಾರ್ಗೆಟ್ ನೀಡಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 2ನೇ ಓವರ್'ನಲ್ಲಿ ಶಿಖರ್ ಧವನ್ ಅವರ ವಿಕೇಟ್ ಕಳೆದುಕೊಂಡಿತು. 11 ರನ್ ಗಳಿಸಿದ ಸ್ಫೋಟಕ ಆಟಗಾರ ರೋಹಿತ್ ದಾಲಾ ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು.

ನಂತರ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಅವರು 2ನೇ ವಿಕೇಟ್ ಜೊತೆಯಾಟಕ್ಕೆ 65 ರನ್'ಗಳ ಪೇರಿಸಿದರು. 40 ಚಂಡುಗಳನ್ನು ಎದುರಿಸಿದ ಧವನ್ 3 ಬೌಂಡರಿಗಳೊಂದಿಗೆ 47 ರನ್ ಬಾರಿಸಿ ರನ್ ಔಟ್ ಆದರು. ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸ್'ರ್'ನೊಂದಿಗೆ 43 ರನ್ ಚಚ್ಚಿದರು.

ಕನ್ನಡಿಗ ಮನೀಶ್ ಪಾಂಡೆ ಹೆಚ್ಚು ಕಾಲವಿರದೆ 10 ಬಾಲ್'ಗಳಲ್ಲಿ 1 ಸಿಕ್ಸ್'ರ್'ನೊಂದಿಗೆ 13 ರನ್ ಬಾರಿಸಿ ಬೇಗನೆ ಔಟಾದರು. ಪಾಂಡ್ಯ(21) ಹಾಗೂ ವಿಕೇಟ್ ಕೀಪರ್ ಧೋನಿ(12) 5ನೇ ವಿಕೇಟ್ ನಷ್ಟಕ್ಕೆ 25 ರನ್ ಪೇರಿಸಿದರು. ದಿನೇಶ್ ಕಾರ್ತಿಕ್ 6 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 13 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾ ತಂಡ 20 ಓವರ್'ಗಳಲ್ಲಿ 172/7 ರನ್ ಕಲೆ ಹಾಕಿತು. ಹರಣಿ ತಂಡದ ಪರ ಡಾಲಾ 35/3 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಭಾರತ 20 ಓವರ್'ಗಳಲ್ಲಿ 172 20 ಓವರ್'ಗಳಲ್ಲಿ 172

(ಧವನ್ 47, ರೈನಾ 43, ಡಾಲಾ 35/3)

(ವಿವರ ಅಪೂರ್ಣ)

loader