ಈಡನ್ ಗಾರ್ಡನ್ಸ್‌ನಲ್ಲಿಂದು ರಸೆಲ್ vs ರಬಾಡ ಫೈಟ್
KKR ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕದನಕ್ಕೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ಸಜ್ಜಾಗಿದೆ. ಡೆಲ್ಲಿ ವಿರುದ್ಧ ಕಳೆದ ಪಂದ್ಯದಲ್ಲಿ ಸೂಪರ್ ಓವರ್’ನಲ್ಲಿ ಮುಗ್ಗರಿಸಿದ್ದ ಕೆಕೆಆರ್ ಇದೀಗ ತಿರುಗೇಟು ನೀಡಲು ಸಜ್ಜಾಗಿದೆ.
ಕೋಲ್ಕತಾ(ಏ.12): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಸುತ್ತಿನ ಮುಖಾಮುಖಿಯಲ್ಲಿ, ಸೂಪರ್ ಓವರ್‌ನಲ್ಲಿ ಸೋಲುಂಡಿದ್ದ ಕೋಲ್ಕತಾ ನೈಟ್ರೈಡರ್ಸ್ ಶುಕ್ರವಾರ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ. ಸಿಕ್ಸರ್ ಮಷಿನ್ ಆ್ಯಂಡ್ರೆ ರಸೆಲ್‌ಗೆ ಮತ್ತೊಮ್ಮೆ ವೇಗಿ ಕಗಿಸೋ ರಬಾಡ ಎದುರಾಗಲಿದ್ದು, ಇವರಿಬ್ಬರ ನಡುವಿನ ಪೈಪೋಟಿ ಎಲ್ಲರ ಕುತೂಹಲ ಕೆರಳಿಸಿದೆ.
6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೆಕೆಆರ್, ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತದೆ. ತಂಡದ ಯಶಸ್ಸಿನಲ್ಲಿ ರಸೆಲ್ ಪಾತ್ರ ನಿರ್ಣಾಯಕವೆನಿಸಿದೆ. 5 ಇನ್ನಿಂಗ್ಸ್‌ಗಳಿಂಂದ 257 ರನ್ ಗಳಿಸಿರುವ ರಸೆಲ್, 150 ರನ್‌ಗಳನ್ನು ಸಿಕ್ಸರ್‌ನಿಂದಲೇ ಗಳಿಸಿದ್ದಾರೆ. ಮತ್ತೊಂದೆಡೆ ಡೆಲ್ಲಿ 6 ಪಂದ್ಯಗಳಿಂದ 6 ಅಂಕ ಗಳಿಸಿದ್ದು, ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ ಶ್ರೇಯಸ್ ಅಯ್ಯರ್ ಪಡೆ.
ಪಿಚ್ ರಿಪೋರ್ಟ್
ಕೋಲ್ಕತಾ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಲ್ಲಿ ಈ ವರ್ಷ ನಡೆದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಸ್ಪಿನ್ನರ್ಸ್ ಪಾತ್ರ ಪ್ರಮುಖವೆನಿಸಲಿದೆ
ಒಟ್ಟು ಮುಖಾಮುಖಿ: 22
ಕೋಲ್ಕತಾ: 13
ಡೆಲ್ಲಿ: 09
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್(ನಾಯಕ), ಆ್ಯಂಡ್ರೆ ರಸೆಲ್, ಶುಭ್‌ಮನ್ ಗಿಲ್, ಪೀಯೂಷ್ ಚಾವ್ಲಾ, ಕುಲ್ದೀಪ್ ಯಾದವ್, ಹ್ಯಾರಿ ಗರ್ನಿ, ಪ್ರಸಿದ್ಧ್ ಕೃಷ್ಣ.
ಡೆಲ್ಲಿ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಕಾಲಿನ್ ಇನ್‌ಗ್ರಾಂ, ಕ್ರಿಸ್ ಮೋರಿಸ್, ರಾಹುಲ್ ತೆವಾಟಿಯಾ, ಅಕ್ಷರ್, ಕಗಿಸೋ ರಬಾಡ, ಸಂದೀಪ್ ಲಮಿಚ್ಚಾನೆ, ಇಶಾಂತ್ ಶರ್ಮಾ.
ಸ್ಥಳ: ಕೋಲ್ಕತಾ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...