ಐಪಿಎಲ್ 2019: ಡೆಲ್ಲಿ ತಂಡ ಸೇರಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Mar 2019, 3:56 PM IST
Delhi capitals appointed sourav ganguly as a advisory for IPL 2019
Highlights

ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಟೀಂ ಇಂಡಿಯಾ ಮಾಜಿ ನಾಯಕನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾದರೆ ಡೆಲ್ಲಿ ತಂಡ ಸೇರಿಕೊಂಡಿರುವ ಮಾಜಿ ನಾಯಕ ಯಾರು? ಇಲ್ಲಿದೆ ವಿವರ.
 

ದೆಹಲಿ(ಮಾ.14): 12ನೇ ಆವೃತ್ತಿ ಪ್ರಶಸ್ತಿ ಮೇಲೆ 8 ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಕಳೆದ 11 ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್(ಡೆಲ್ಲಿ ಡೇರ್‌ಡೆವಿಲ್ಸ್) ಇದೀಗ ಪ್ರಶಸ್ತಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದೆ. ಪಂದ್ಯ ಆರಂಭಕ್ಕೆ ಕೆಲ ದಿನ ಬಾಕಿ ಇರುವಾಗಲೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ 8ರ ಬದಲು 7ಕ್ಕೆ ಐಪಿಎಲ್- ಮುಂಬೈ ಇಂಡಿಯನ್ಸ್ ವಿರೋಧ!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನಾಗಿ ಸೌರವ್ ಗಂಗೂಲಿಯನ್ನ ನೇಮಕ ಮಾಡಲಾಗಿದೆ. ಡೆಲ್ಲಿ ತಂಡ ಗಂಗೂಲಿ ಸೇವೆ ಬಳಸಿಕೊಳ್ಳಲು ಉತ್ಸುಕವಾಗಿದೆ ಎಂದಿದೆ. ಗಂಗೂಲಿ ನೇಮಕದೊಂದಿಗೆ ದೆಹಲಿ ತಂಡ ದಿಗ್ಗಜ ಸ್ಟಾಫ್ ಹೊಂದಿದೆ ತಂಡ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. 

 

 

ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್‌ಗೆ ನಿರಾಸೆ!

ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದೆಹಲಿ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ್ದರೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದೀಗ ಸಲಹೆಗಾರನಾಗಿ ಗಂಗೂಲಿ ಕೂಡ ಸೇರಿಕೊಂಡಿರುವುದು ಡೆಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
 

loader