ಪಂತ್, ಶಾ, ಅಯ್ಯರ್ ಭರ್ಜರಿ ಆಟ: ಪಂದ್ಯಕ್ಕೆ ಮಳೆಯ ಕಾಟ

DD vs RR Rishabh Pant Departs But Delhi On Top
Highlights

2ನೇ ವಿಕೇಟ್ ಜೋಡಿಗೆ ಅಬ್ಬರಿಸಿದ ಶಾ ಹಾಗೂ ನಾಯಕ ಅಯ್ಯರ್ ಜೋಡಿ ಬಿರುಗಾಳಿಯನ್ನೇ ಅಬ್ಬರಸಿದರು. ಶಾ 8 ನೇ ಓವರ್ ನಲ್ಲಿ  25 ಚಂಡುಗಳಲ್ಲಿ 4 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ 47 ಸಿಡಿಸಿ ಔಟಾದರು.  ಅನಂತರ ಆರಂಭವಾಗಿದ್ದು ಮತ್ತೊಂದು ಆರ್ಭಟ. ಪಂತ್  ಸಿಡಿಲಬ್ಬರದ ಆಟಕ್ಕೆ ರಾಜಸ್ಥಾನ್ ಆಟಗಾರರು ನಲುಗಿ ಹೋದರು. 

ನವದೆಹಲಿ(ಮೇ.02): ಮಳೆಯ ನಡುವೆಯೂ ಡೆಲ್ಲಿ ಡೇರ್'ಡೇವಿಲ್ಸ್ ತಂಡದ ಆಟಗಾರರು ಸ್ಫೋಟಕ ಆಟವಾಡಿ ರಾಜಸ್ಥಾನ್ ತಂಡಕ್ಕೆ 12 ಓವರ್'ಗಳಲ್ಲಿ 151ಗೆಲುವಿನ ಗುರಿ ನೀಡಿದ್ದಾರೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್  ಆಹ್ವಾನಿಸಿತು. ಪಂದ್ಯಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಆವರಿಸಿತು. ನಂತರ ಶುರುವಾದ ಆಟಕ್ಕೆ 18 ಓವರ್'ಗಳಿಗೆ ಪಂದ್ಯವನ್ನು ನಿಗದಿಪಡಿಸಲಾಯಿತು. ಮೊದಲ ಓವರ್'ನಲ್ಲಿಯೇ ಮನ್ರೋ ವಿಕೇಟ್ ಕಳೆದುಕೊಂಡರು. 2ನೇ ವಿಕೇಟ್ ಜೋಡಿಗೆ ಅಬ್ಬರಿಸಿದ ಶಾ ಹಾಗೂ ನಾಯಕ ಅಯ್ಯರ್ ಜೋಡಿ ಬಿರುಗಾಳಿಯನ್ನೇ ಅಬ್ಬರಸಿದರು. ಶಾ 8 ನೇ ಓವರ್ ನಲ್ಲಿ  25 ಚಂಡುಗಳಲ್ಲಿ
4 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ 47 ಸಿಡಿಸಿ ಔಟಾದರು.  ಅನಂತರ ಆರಂಭವಾಗಿದ್ದು ಮತ್ತೊಂದು ಆರ್ಭಟ. ಪಂತ್  ಸಿಡಿಲಬ್ಬರದ ಆಟಕ್ಕೆ ರಾಜಸ್ಥಾನ್ ಆಟಗಾರರು ನಲುಗಿ ಹೋದರು. 
ಇವರಿಬ್ಬರ ಜೋಡಿ ಮೂರನೆ ವಿಕೇಟ್ ನಷ್ಟಕ್ಕೆ 14.3 ಓವರ್'ಗಳಲ್ಲಿ 172 ರನ್ ಪೇರಿಸಿದರು. ಅಯ್ಯರ್  35 ಎಸತಗಳಲ್ಲಿ  3 ಸಿಕ್ಸ್'ರ್ 3 ಬೌಂಡರಿಯೊಂದಿಗೆ  50 ರನ್ ಬಾರಿಸಿದರೆ, ಪಂತ್  ಕೇವಲ 27 ಚಂಡುಗಳಲ್ಲಿ 5 ಸಿಕ್ಸ್'ರ್ 7 ಬೌಂಡರಿಯೊಂದಿಗೆ 69 ರನ್ ಚಚ್ಚಿದರು. ತಂಡದ ಮೊತ್ತ 17.1 ಓವರ್'ಗಳಲ್ಲಿ 191 ಇದ್ದಾಗ ಮತ್ತೆ ಮಳೆ ಶುರುವಾಗಿ ಒಂದು ಕಡೆಯ ಆಟವನ್ನು ಸಮಾಪ್ತಿಗೊಳಿಸಿ ರಾಜಸ್ಥಾನ್ ತಂಡಕ್ಕೆ 12 ಓವರ್'ಗಳಲ್ಲಿ 151 ಗುರಿ ನೀಡಲಾಗಿದೆ.

ಸ್ಕೋರ್
ಡೆಲ್ಲಿ ಡೇರ್'ಡೇವಿಲ್ಸ್ 196/6
(ಪಂತ್ 69, ಅಯ್ಯರ್ 50,ಶಾ 47 )

ವಿವರ ಅಪೂರ್ಣ 

loader