ಡೇವಿಸ್ ಕಪ್: ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡ ಪ್ರಕಟ!
ಡೇವಿಸ್ ಕಪ್ ಟೂರ್ನಿಗಾಗಿ ಭಾರತ ತಂಡ ಬದ್ಧವೈರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಸಜ್ಜಾಗಿದೆ. 55 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಭಾರತ ತಂಡ ಡೇವಿಸ್ ಕಪ್ ಟೆನಿಸ್ ಟೂರ್ನಿ ಆಡಲಿದೆ. ಈ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ನವದೆಹಲಿ(ಆ.06): ಬರೋಬ್ಬರಿ 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್ ತಂಡ ಪ್ರವಾಸ ಮಾಡುತ್ತಿದೆ. 1964 ರ ಬಳಿಕ ಡೇವಿಸ್ ಕಪ್ ಟೂರ್ನಿಗಾಗಿ ಬದ್ಧವೈರಿಗಳ ನಾಡಿಗೆ ಭಾರತ ಪ್ರಯಾಣ ಬೆಳೆಸಿಲ್ಲ. ಸೆಪ್ಟೆಂಬರ್ 14 ಹಾಗೂ 15 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಡೇವಿಸ್ ಕಪ್ ಟೂರ್ನಿಗಾಗಿ ಭಾರತ ತಂಡ ಪ್ರಕಟಿಸಲಾಗಿದೆ. ತಂಡದಲ್ಲಿ ಕನ್ನಡಿಗ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಡೇವಿಸ್ ಕಪ್: 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ, ಭದ್ರತೆ ಭರವಸೆ!
ಪ್ರಜ್ಞೇಶ್ವರ್ ಗುಣೇಶ್ವರನ್ ಭಾರತ ಡೇವಿಸ್ ಕಪ್ ತಂಡವನ್ನು ಮುನ್ನಡೆಸಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಗುಣೇಶ್ವರನ್ ಹಾಗೂ ರಾಮಕುಮಾರ್ ರಾಮನಾಥನ್ ಆಯ್ಕೆಯಾಗಿದ್ದರೆ, ಡಬಲ್ಸ್ ವಿಭಾಗದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ದಿವಿಜಿ ಶರಣ್ ಆಯ್ಕೆಯಾಗಿದ್ದಾರೆ.
ಮೀಸಲು ಟೆನಿಸ್ ಪುಟುವಾಗಿ ಸಸಿ ಕುಮಾರ್ ಮುಕುಂದ್ ಆಯ್ಕೆಯಾಗಿದ್ದಾರೆ. ಇನ್ನು ಅತ್ಯುತ್ತಮ ಪ್ರದರ್ಶನದ ಮೂಲಕ ಗಮನಸೆಳೆದ ಸುಮಿತ್ ನಗಾಲ್ ಇಂಜುರಿ ಕಾರಣದಿಂದ ಟೂರ್ನಿಗೆ ಲಭ್ಯರಿಲ್ಲ. ಸೆ.14-15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ/ಓಷಿಯಾನಿಯಾ ಗುಂಪು 1 ಪಂದ್ಯ ನಡೆಯಲಿದೆ. ಭಾರತ ತಂಡಕ್ಕೆ ಗರಿಷ್ಠ ಭದ್ರತೆ ನೀಡಲಾಗುವುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.