ಡೇವಿಸ್ ಕಪ್: 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ, ಭದ್ರತೆ ಭರವಸೆ!

55 ವರ್ಷಗಳ ಬಳಿಕ ಡೇವಿಸ್ ಕಪ್ ಟೆನಿಸ್ ಟೂರ್ನಿಗಾಗಿ ಭಾರತ ತಂಡ , ಪಾಕಿಸ್ತಾನಕ್ಕೆ ತೆರಳಲು ಸಜ್ಜಾಗಿದೆ. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭದ್ರತೆ ಪ್ರಶ್ನೆ ಎದ್ದಿದೆ. ಪಾಕಿಸ್ತಾನಕ್ಕೆ ತೆರಳು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಭಾರತ ಮುಂದಾಗಿದೆ. ಇತ್ತ ಪಾಕಿಸ್ತಾನ ಕೂಡ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಿದೆ. 
 

Devis cup  2019 Pakistan assured high security to Indian team

ನವದೆಹಲಿ(ಆ.02): ಭಾರತ ಡೇವಿಸ್‌ ಕಪ್‌ ತಂಡಕ್ಕೆ ಭಾರೀ ಭದ್ರತೆ ಒದಗಿಸುವ ಭರವಸೆಯನ್ನು ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ (ಪಿಟಿಎಫ್‌) ನೀಡಿದೆ. 1964ರ ಬಳಿಕ ಭಾರತ ಡೇವಿಸ್‌ ಕಪ್‌ ತಂಡ ಪಾಕಿಸ್ತಾನಕ್ಕೆ ತೆರಳಿಲ್ಲ. ಅಲ್ಲದೇ 2006ರ ನಂತರ ಬದ್ಧವೈರಿಗಳ ನಡುವೆ ಪಂದ್ಯ ನಡೆದಿಲ್ಲ. 

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್‌ ಡೇವಿಸ್‌ ಕಪ್‌

ಸೆ.14-15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ/ಓಷಿಯಾನಿಯಾ ಗುಂಪು 1 ಪಂದ್ಯ ನಡೆಯಲಿದ್ದು, ಭಾರತ ತಂಡ ಇಸ್ಲಾಮಾಬಾದ್‌ಗೆ ಪ್ರಯಾಣಿಸಲು ಆಸಕ್ತಿ ತೋರಿದೆ. ಇತ್ತೀಚೆಗಷ್ಟೇ ಭಾರತ ತಂಡದ ನಾಯಕ ಮಹೇಶ್‌ ಭೂಪತಿ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಪಿಟಿಎಫ್‌ ಕಾರ್ಯದರ್ಶಿ, ಗುಲ್‌ ರೆಹಮಾನ್‌ ‘ಸಂಪೂರ್ಣ ಭದ್ರತೆ ಒದಗಿಸಲಾಗುವುದು’ ಎಂದಿದ್ದಾರೆ.

Latest Videos
Follow Us:
Download App:
  • android
  • ios