ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಅಂತಹದ್ದೊಂದು ಏಕರೀತಿಯ ದಾಖಲೆ ನಿರ್ಮಾಣವಾಗಿದೆ.
ಬೆಂಗಳೂರು(ಜೂ.06): ಕ್ರಿಕೆಟ್'ನಲ್ಲಿ ಕೆಲವೊಮ್ಮೆ ಕಾಕತಾಳಿಯವೆಂಬಂತೆ ಒಂದೇ ರೀತಿಯ ದಾಖಲೆಗಳು ಅರಿವಿಲ್ಲದಂತೆಯೇ ನಿರ್ಮಾಣವಾಗಿ ಬಿಡುತ್ತವೆ.
ಅಂತಹ ಸನ್ನಿವೇಶಕ್ಕೆ ಕ್ರಿಕೆಟ್ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು, ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಅಂತಹದ್ದೊಂದು ಏಕರೀತಿಯ ದಾಖಲೆ ನಿರ್ಮಾಣವಾಗಿದೆ. ಡೇವಿಡ್ ವಾರ್ನರ್ ಕೇವಲ 93 ಇನಿಂಗ್ಸ್'ನಲ್ಲಿ 4000 ರನ್ ಪೂರೈಸುವ ಮೂಲಕ ಆಸ್ಟ್ರೇಲಿಯಾ ಪರ ಅತಿವೇಗವಾಗಿ ನಾಲ್ಕು ಸಹಸ್ರ ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆಗೆ ಪಾತ್ರವಾದರು.
ಅದರಲ್ಲೇನು ವಿಶೇಷ ಅಂತಿರಾ, ವಿರಾಟ್ ಕೊಹ್ಲಿ 2013ರಲ್ಲಿ 93 ಇನಿಂಗ್ಸ್'ನಲ್ಲಿ ನಾಲ್ಕು ಸಹಸ್ರ ರನ್ ಪೂರೈಸಿದ್ದರು. ಮತ್ತೂ ವಿಶೇಷವೇನಪ್ಪಾ ಅಂದ್ರೆ ವಿರಾಟ್ ಹಾಗೂ ವಾ 93 ಇನಿಂಗ್ಸ್'ನಲ್ಲಿ ಸಿಡಿಸಿದ್ದು ತಲಾ 13 ಶತಕಗಳು ಅಂದ್ರ ನೀವೂ ನಂಬಲೇಬೇಕು.
