ಸ್ಟೈನ್ ಟೆಸ್ಟ್ ಕ್ರಿಕೆಟ್'ನಲ್ಲಿ 417 ವಿಕೆಟ್ ಕಬಳಿಸಿದ್ದು, ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ವಿಕೆಟ್ ಕಿತ್ತಿರುವ ಶಾನ್ ಪೊಲ್ಲಾಕ್(421) ದಾಖಲೆ ಹಿಂದಿಕ್ಕಲು ಕೇವಲ 4 ವಿಕೆಟ್'ಗಳ ಅವಶ್ಯಕತೆಯಿದೆ. ಸ್ಟೈನ್ ಮೊದಲ ಟೆಸ್ಟ್‌'ಗೆ ಅಲಭ್ಯರಾಗಿರುವುದು ದಕ್ಷಿಣ ಆಫ್ರಿಕಾದ ವೇಗದ ಬಲವನ್ನು ಕೊಂಚ ಕುಗ್ಗಿಸಿದಂತಾಗಿದೆ.
ಕೇಪ್'ಟೌನ್(ಜ.03): ಭಾರತ ವಿರುದ್ಧ ಜ.5ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್'ನಿಂದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಹೊರಬಿದ್ದಿದ್ದಾರೆ.
ಗಾಯದ ಸಮಸ್ಯೆಯಿಂದ 14 ತಿಂಗಳುಗಳ ಕಾಲ ಟೆಸ್ಟ್ ಕ್ರಿಕೆಟ್'ನಿಂದ ದೂರವಿದ್ದ ಸ್ಟೈನ್, ಕಳೆದ ವಾರ ಜಿಂಬಾಬ್ವೆ ವಿರುದ್ಧ ನಡೆದ 4 ದಿನಗಳ ಟೆಸ್ಟ್'ನಲ್ಲೇ ಕಣಕ್ಕಿಳಿಯಬೇಕಿತ್ತು. ಆದರೆ ಜ್ವರದ ಕಾರಣ ಅವರು ಪಂದ್ಯದಿಂದ ಹೊರಬಿದ್ದಿದ್ದರು. ಭಾರತ ವಿರುದ್ಧ ಮೊದಲ ಟೆಸ್ಟ್'ಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ, ಮೊದಲ ಟೆಸ್ಟ್'ನಲ್ಲಿ ಸ್ಟೈನ್ ಆಡುವುದು ಅಸಾಧ್ಯ ಎಂದು ಮಂಗಳವಾರ ಆಫ್ರಿಕಾದ ಕೋಚ್ ಆಟಿಸ್ ಗಿಬ್ಸನ್ ಹೇಳಿದರು.
ಸ್ಟೈನ್ ಟೆಸ್ಟ್ ಕ್ರಿಕೆಟ್'ನಲ್ಲಿ 417 ವಿಕೆಟ್ ಕಬಳಿಸಿದ್ದು, ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ವಿಕೆಟ್ ಕಿತ್ತಿರುವ ಶಾನ್ ಪೊಲ್ಲಾಕ್(421) ದಾಖಲೆ ಹಿಂದಿಕ್ಕಲು ಕೇವಲ 4 ವಿಕೆಟ್'ಗಳ ಅವಶ್ಯಕತೆಯಿದೆ. ಸ್ಟೈನ್ ಮೊದಲ ಟೆಸ್ಟ್'ಗೆ ಅಲಭ್ಯರಾಗಿರುವುದು ದಕ್ಷಿಣ ಆಫ್ರಿಕಾದ ವೇಗದ ಬಲವನ್ನು ಕೊಂಚ ಕುಗ್ಗಿಸಿದಂತಾಗಿದೆ.
