ಎತ್ತರದ ಭಯ ಗೆಲ್ಲಲು ಬಂಜಿ ಜಂಪ್ ಮಾಡಿದ ಡಿ ಗುಕೇಶ್; ಚೆಸ್ ಚಾಂಪಿಯನ್‌ನಿಂದ ಹೊಸ ಸಾಹಸ!

ವಿಶ್ವ ಚಾಂಪಿಯನ್ ಆದ ನಂತರ, ಗುಕೇಶ್ ತಮ್ಮ ಎತ್ತರದ ಭಯವನ್ನು ಜಯಿಸಲು ಬಂಜಿ ಜಂಪ್ ಮಾಡಿದ್ದಾರೆ.

D Gukesh conquers fear of heights with bungee jump after winning world championship kvn

ನವದೆಹಲಿ. ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದ ನಂತರ ಗುಕೇಶ್ ಇನ್ನೊಂದು ಸಾಧನೆ ಮಾಡಿದ್ದಾರೆ. ಅದು ಎತ್ತರದ ಭಯವನ್ನು ಗೆಲ್ಲುವುದು. ಇದಕ್ಕಾಗಿ ಅವರು ಬಂಜಿ ಜಂಪ್ ಮಾಡಿದರು. ಜಿಗಿಯುವಾಗ ಗುಕೇಶ್ “ನಾನು ವಿಶ್ವ ಚಾಂಪಿಯನ್” ಎಂದು ಕೂಗಿದರು.

18 ವರ್ಷದ ಗುಕೇಶ್ ತಮ್ಮ ತರಬೇತುದಾರ ಪೋಲಿಷ್ ಗ್ರ್ಯಾಂಡ್‌ಮಾಸ್ಟರ್ ಗ್ರೆಗೋರ್ಜ್ ಗಜೆವ್ಸ್ಕಿಗೆ ಡಿಂಗ್ ಲಿರೆನ್‌ರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರೆ ಎತ್ತರದ ಭಯವಿದ್ದರೂ ಬಂಜಿ ಜಂಪ್ ಮಾಡುವುದಾಗಿ ಭರವಸೆ ನೀಡಿದ್ದರು. ವಿಶ್ವ ಚಾಂಪಿಯನ್ ಆದ ನಂತರ ಅವರು ತಮ್ಮ ಭರವಸೆಯನ್ನು ಉಳಿಸಿಕೊಂಡರು.

ಮೊದಲು ಧೋನಿ, ಆಮೇಲೆ ಹಾಕಿ ಈಗ ಗುಕೇಶ್; ಭಾರತೀಯರ ಯಶಸ್ಸಿನ ಹಿಂದಿದೆ ಈ ವಿದೇಶಿಗನ ಮಾಸ್ಟರ್ ಮೈಂಡ್!

ಭಾರತದ ಗ್ರ್ಯಾಂಡ್‌ ಮಾಸ್ಟರ್‌, 18 ವರ್ಷದ ಡಿ.ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ನ.25ರಂದು ಸಿಂಗಾಪುರದಲ್ಲಿ ಆರಂಭಗೊಂಡಿದ್ದ 2023ರ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಗುರುವಾರ ಅತಿರೋಚಕ ಗೆಲುವು ಸಾಧಿಸಿದ ಗುಕೇಶ್‌, ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ಅತಿ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದರು. 

ಹೊಸ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ ದೊಮ್ಮರಾಜುಗೆ ಗರ್ಲ್‌ಫ್ರೆಂಡ್‌ ಇದ್ದಾಳಾ?

ರೋಚಕ ಹಣಾಹಣಿ: ಕೊನೆಯ ಸುತ್ತನ್ನು ಕಪ್ಪು ಕಾಯಿಗಳೊಂದಿಗೆ ಆಡಿದ ಗುಕೇಶ್‌, ಪಂದ್ಯ ಸಾಗಿದಂತೆ ಗೆಲ್ಲುವ ಫೇವರಿಟ್‌ ಅಂತೇನೂ ಕಂಡು ಬರಲಿಲ್ಲ. ಆದರೆ ಯಾವ ಹಂತದಲ್ಲೂ ಲಿರೆನ್‌ ದೊಡ್ಡ ಮಟ್ಟದ ಮೇಲುಗೈ ಸಾಧಿಸಲು ಗ್ರ್ಯಾಂಡ್‌ ಮಾಸ್ಟರ್‌ ಗುಕೇಶ್‌ ಬಿಡಲಿಲ್ಲ. ಪಂದ್ಯ ಡ್ರಾದತ್ತ ಸಾಗುತ್ತಿದೆ ಎಂದು ಅನಿಸಿ ಉಭಯ ಆಟಗಾರರು ಟೈ ಬ್ರೇಕರ್‌ಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. ಇಬ್ಬರ ಬಳಿಯೂ ಉಳಿದಿದ್ದು ತಲಾ ಒಂದು ರೂಕ್‌ (ಆನೆ) ಹಾಗೂ ಬಿಷಪ್‌ (ಒಂಟೆ). ಈ ಹಂತದಲ್ಲಿ ಲಿರೆನ್‌ ಬಹಳ ದೊಡ್ಡ ಎಡವಟ್ಟು ಮಾಡಿದರು. ಅವರ ಕೊನೆಯ ನಡೆ, ಚೆಸ್‌ ಜಗತ್ತಿಗೆ ಅಚ್ಚರಿ ಮೂಡಿಸಿತು. ಪಂದ್ಯದುದ್ದಕ್ಕೂ ಅತ್ಯುತ್ತಮ ಹೋರಾಟ ನಡೆಸಿದ ಲಿರೆನ್‌, ಕೊನೆಗೆ ವಿಶ್ವ ಕಿರೀಟವನ್ನು ಗುಕೇಶ್‌ಗೆ ಒಪ್ಪಿಸಿ ನಿರ್ಗಮಿಸಿದರು.

ಆಟ ಮುಗಿಸಿ ವಿಜಯ ಮಾಲೆ ಮುಡಿಗೆರಿಸುವ ಕೊನೆಯ ಕ್ಷಣದಲ್ಲಿ ನಿರ್ಗಮಿಸುವ ಸಂದರ್ಭದಲ್ಲಿ ತಾನು ಬಳಸಿದ ಕಪ್ಪು ಬಣ್ಣದ ಚೆಸ್ ಕ್ವಾಯಿನ್ಸ್‌ಗಳನ್ನು ಸರಿಯಾಗಿ ಜೇೂಡಿಸಿ ಹೇೂಗಿದ್ದು ಮಾತ್ರವಲ್ಲ ತನ್ನ ಎದುರಾಳಿ ಸೇೂತು ಬೇಸರದಿಂದ ಹೇೂಗುವಾಗ ತಾನು ಬಳಸಿದ ಬಿಳಿಯ ಚೆಸ್ ಕ್ವಾಯಿನ್ಸ್ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಮತ್ತೆ ಈತನೇ ಸರಿಯಾಗಿ ಜೇೂಡಿಸಿ ಇಟ್ಟು ಹೇೂಗುವಾಗ ಗುಕೇಶ್ ಚೆಸ್ ಬೇೂರ್ಡಿಗೆ ನಮಸ್ಕರಿಸಿ ವಿಜಯದ ಆನಂದ ಭಾಷ್ಪವನ್ನು ಭಾವನಾತ್ಮಕವಾಗಿ ದೇವರ ಮುಂದಿಟ್ಟು ನಿಗ೯ಮಿಸಿದ ದೃಶ್ಯ ನಿಜಕ್ಕೂ ಹೃದಯ ಮಿಡಿಯುವಂತಿತ್ತು. 

 

ಡಿ.ಗುಕೇಶ್‌ಗೆ ಅಭಿನಂದನೆ ಸಲ್ಲಿಸಿದ ಎಲಾನ್‌ ಮಸ್ಕ್‌

ನವದೆಹಲಿ: ಖ್ಯಾತ ಉದ್ಯಮಿ, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರು ಚೆಸ್‌ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಗುರುವಾರ ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಗೆಲ್ಲುವ ಮೂಲಕ 18 ವರ್ಷದ ಗುಕೇಶ್‌, ವಿಶ್ವದ ಅತಿ ಕಿರಿಯ ಚೆಸ್‌ ಚಾಂಪಿಯನ್‌ ಎನಿಸಿಕೊಂಡಿದ್ದರು. ಶುಕ್ರವಾರ ತಮ್ಮ ಸಂಭ್ರಮಾಚರಣೆಯ ಫೋಟೋವನ್ನು ಗುಕೇಶ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮಸ್ಕ್‌ ಅಭಿನಂದನೆಗಳು ಎಂದು ಪ್ರತಿಕ್ರಿಯಿಸಿದ್ದಾರೆ.

 

Latest Videos
Follow Us:
Download App:
  • android
  • ios